ಡೆಲ್ಟಾ ವಿಮಾನಕ್ಕೆ ಸಿಡಿಲು ಬಡಿತ

ಜಾರ್ಜಿಯಾದ ಹಾರ್ಟ್ಸ್ ಫೀಲ್ಡ್ ವಿಮಾನದ ನಿಲ್ದಾಣದ ರನ್ ವೇಯಲ್ಲಿ ನಿಂತಿದ್ದ ಡೆಲ್ಟ್ ವಿಮಾನಕ್ಕೆ ಸಿಡಿಲು ಬಡಿದಿರುವ ವಿಡಿಯೋ ಸೆರೆಯಾಗಿದೆ...
ಡೆಲ್ಟಾ ವಿಮಾನ
ಡೆಲ್ಟಾ ವಿಮಾನ

ಅಟ್ಲಾಂಟ: ಜಾರ್ಜಿಯಾದ ಹಾರ್ಟ್ಸ್ ಫೀಲ್ಡ್ ವಿಮಾನದ ನಿಲ್ದಾಣದ ರನ್ ವೇಯಲ್ಲಿ ನಿಂತಿದ್ದ ಡೆಲ್ಟ್ ವಿಮಾನಕ್ಕೆ ಸಿಡಿಲು ಬಡಿದಿರುವ ವಿಡಿಯೋ ಸೆರೆಯಾಗಿದೆ.

ಭೋರೆಂದು ಸುರಿಯುತ್ತಿದ್ದ ಮಳೆಯ ಸಂದರ್ಭದಲ್ಲಿ ಜಾಕ್ ಫೇರ್ಕಿನ್ಸ್ ಎಂಬುವರು ವಿಮಾನ ನಿಲ್ದಾಣದಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿದ್ದು, ಯೂ ಟ್ಯುಬ್ ಗೆ ಹರಿಬಿಟ್ಟಿದ್ದಾರೆ. ಯೂ ಟ್ಯುಬ್ ನಲ್ಲಿ ಅಪ್ ಲೋಡ್ ಆಗುತ್ತಿದ್ದಂತೆ ಲಕ್ಷಾಂತರ ಮಂದಿ ಈ ವಿಡಿಯೋವನ್ನು ನೋಡಿದ್ದಾರೆ. ಡೆಲ್ಟ್ ವಿಮಾನದಲ್ಲಿ ಸುಮಾರು 111 ಪ್ರಯಾಣಿಕರು ಸೇರಿ ಆರು ಮಂದಿ ಸಿಬ್ಬಂದಿ ಇದ್ದರು.

ಆಧುನಿಕ ವಿಮಾನಗಳಲ್ಲಿ ಸಿಡಿಲು ತಡೆದುಕೊಳ್ಳುವ ತಂತ್ರಜ್ಞಾನವನ್ನು ಅಳವಡಿಸಿರುವ ಕಾರಣ ವಿಮಾನಕ್ಕೂ ಮತ್ತು ಒಳಗಿದ್ದ ಪ್ರಯಾಣಿಕರಿಗೂ ಯಾವುದೇ ರೀತಿಯ ತೊಂದರೆಯಗಿಲ್ಲ ಎಂದು ವಿಮಾನ ಸಿಬ್ಬಂದಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com