ಕೊರಿಯಾಗಳ ಮಧ್ಯೆ ಮಾತುಕತೆ

ಉಭಯ ದೇಶಗಳ ನಡುವಣ ಬಿಕ್ಕಟ್ಟು ತೀವ್ರಗೊಂಡು ಯುದ್ಧದತ್ತ ಮುಖಮಾಡಿರುವ ಸಂದರ್ಭದಲ್ಲಿ ಉತ್ತರ ದಕ್ಷಿಣ ಕೊರಿಯ ದೇಶಗಳು ಉನ್ನತ ಮಟ್ಟದ ಮಾತುಕತೆ ನಡೆಸಿವೆ...
ಘರ್ಷಣೆ ಪೀಡಿತ ಕೊರಿಯಾ ಗಡಿ
ಘರ್ಷಣೆ ಪೀಡಿತ ಕೊರಿಯಾ ಗಡಿ

ಕೊನೆಯ ಕ್ಷಣದಲ್ಲಿ ಉಭಯ ದೇಶಗಳ ನಡುವೆ ತುರ್ತು ಮಾತುಕತೆ, ಗಡಿ ಗ್ರಾಮದಲ್ಲಿ ನಡೆಯಿತು ಉತ್ತರ ಕೊರಿಯಾ ರಹಸ್ಯ ಚರ್ಚೆ
ಪ್ಯೋಗ್ಯಾಂಗ್:
ಉಭಯ ದೇಶಗಳ ನಡುವಣ ಬಿಕ್ಕಟ್ಟು ತೀವ್ರಗೊಂಡು ಯುದ್ಧದತ್ತ ಮುಖಮಾಡಿರುವ ಸಂದರ್ಭದಲ್ಲಿ ಉತ್ತರ ದಕ್ಷಿಣ ಕೊರಿಯ ದೇಶಗಳು ಉನ್ನತ ಮಟ್ಟದ ಮಾತು ಕತೆ ನಡೆಸಿವೆ.

ಎರಡೂ ದೇಶ ಗಳ ಹಿರಿಯ ನಾಯಕರು ಗಡಿಯ ಎಲ್ಲಿರುವ ಪನ್ಮುಂಜೊಮ್ ಟ್ರೂಸ್ ಗ್ರಾಮದಲ್ಲಿ ಭೇಟಿಯಾಗಿ ಮಾತನಾಡಿರುವುದಾಗಿ ವರದಿಗಳು ಬಂದಿವೆ. ಒಂದು ದಿನದ ಹಿಂದಷ್ಟೇ ಗಡಿಗಳಲ್ಲಿ ಲೌಡ್ ಸ್ಪೀಕರ್ ಪ್ರಚಾರ ತಕ್ಷಣವೇ ನಿಲ್ಲಿಸದಿದ್ದರೆ, ನಮ್ಮ ಮಿಲಿಟರಿ ಪ್ರಬಲ ಪ್ರತ್ಯುತ್ತರ ನೀಡುವುದು ಅನಿವಾರ್ಯವಾಗುತ್ತದೆ ಎಚ್ಚರ ಎಂದು ಉತ್ತರ ಕೊರಿಯ, ದಕ್ಷಿಣಕೊರಿಯಗೆ ಎಚ್ಚರಿಕೆ ನೀಡಿತ್ತು.

ಗುರುವಾರ ಗುಂಡಿನ ಚಕಮಕಿ ನಡೆದಾಗಲೇ ಉತ್ತರ ಕೊರಿಯ `ಹೆಚ್ಚೂಕಮ್ಮಿ ಯುದ್ಧ ಪ್ರಾರಂಭವಾಗಿ ದೆ' ಎಂದು ಘೋಷಿಸಿತ್ತು. ಉ.ಕೊರಿಯದ ಅಧ್ಯಕ್ಷ ಕಿಮ್ ಜಾಂಗ್ ಉನ್ ತನ್ನ ಮುಂಚೂಣಿಯ ತುಕಡಿಗಳನ್ನು ಯುದ್ಧಕ್ಕೆ ತಯಾರಾಗಲು ಸೂಚನೆ ನೀಡಿಯಾಗಿದೆ. ಗಡಿಯಲ್ಲಿ ಗೌಪ್ಯವಾಗಿ ಮಾತುಕತೆ ನಡೆಸಿರುವುದರಿಂದ ಆ ವಿವರಗಳು ಮಾಧ್ಯಮಕ್ಕೆ ಲಭ್ಯವಾಗಿಲ್ಲ. ಗುಪ್ತಸಭೆ ಯಲ್ಲಿ ದಕ್ಷಿಣ ಕೊರಿಯದಿಂದ ರಾಷ್ಟ್ರೀಯ ಭದ್ರತಾ ಸಲಹಗಾರ ಕಿಮ್ ಕ್ವಾನ್ ಜಿನ್ ಮತ್ತು ಹಾಂಗ್ ಯೋಂಗ್ ಪ್ರೋ ಪ್ರತಿನಿಧಿಸಿದರೆ, ಉತ್ತರದಿಂದ ಹ್ವಾಂಗ್ ಪ್ರೋಂಗ್ ಸೊ ಮತ್ತು ಕಿಂ ಯೋಂಗ್ ಗೊನ್ ಭಾಗವಹಿಸುವರೆಂದು ತಿಳಿಸಲಾಗಿತ್ತು.

ದಕ್ಷಿಣ ಕೊರಿಯಾ ಈಗಾಗಲೇ ಗಡಿಯಲ್ಲಿರುವ ಸುಮಾರು 4ಸಾವಿರ ನಿವಾಸಿಗಳನ್ನು ತೆರವುಗೊಳಿಸಿ ಯುದ್ಧಕ್ಕೆ ವೇದಿಕೆ ಸಿದ್ಧಗೊಳಿಸಿದ್ದು, ಲೌಡ್ ಸ್ಪೀಕರ್ ಕಾದಾಟವನ್ನು ಚುರುಕುಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com