ಸಿರಿಯಾದ ಪುರಾತನ ದೇಗುಲ ನಾಶಪಡಿಸಿದ ಇಸಿಸ್

ಮರುಭೂಮಿಯ ಮುತ್ತು ಎಂದೇ ಖ್ಯಾತಿ ಪಡೆದಿದ್ದ ಸಿರಿಯಾದ ಪುರಾತನ ಕಾಲದ ಬಾಲ್ ಶಮೀನ ದೇಗುಲವನ್ನು ಇಸ್ಲಾಮಿಕ್ ಸ್ಟೇಟ್ ಇರಾಕ್ ನ ಉಗ್ರರು ನಾಶಪಡಿಸುವ ಮೂಲಕ ಮತ್ತೊಮ್ಮೆ ತಮ್ಮ ಉಗ್ರ ನರ್ತನವನ್ನು ಭಾನುವಾರ ಮಾಡಿದ್ದಾರೆ...
'ಮರುಭೂಮಿಯ ಮುತ್ತು' ಖ್ಯಾತಿಯ ಬಾಲ್ ಶಮೀನ ದೇಗುಲ (ಸಂಗ್ರಹ ಚಿತ್ರ)
'ಮರುಭೂಮಿಯ ಮುತ್ತು' ಖ್ಯಾತಿಯ ಬಾಲ್ ಶಮೀನ ದೇಗುಲ (ಸಂಗ್ರಹ ಚಿತ್ರ)
Updated on: 

ಬೈರುತ್: ಮರುಭೂಮಿಯ ಮುತ್ತು ಎಂದೇ ಖ್ಯಾತಿ ಪಡೆದಿದ್ದ ಸಿರಿಯಾದ ಪುರಾತನ ಕಾಲದ ಬಾಲ್ ಶಮೀನ ದೇಗುಲವನ್ನು ಇಸ್ಲಾಮಿಕ್ ಸ್ಟೇಟ್ ಇರಾಕ್ ನ ಉಗ್ರರು ನಾಶಪಡಿಸುವ ಮೂಲಕ ಮತ್ತೊಮ್ಮೆ ತಮ್ಮ ಉಗ್ರ ನರ್ತನವನ್ನು ಭಾನುವಾರ ಮಾಡಿದ್ದಾರೆ.

ಸಿರಿಯಾದ ಪಲ್ಮಿರ ನಗರದ ಮೇಲೆ ಇಸಿಸ್ ಉಗ್ರರು ದಾಳಿ ಮಾಡಿದ್ದರು. ನಂತರ ಈ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದ ಉಗ್ರರು ನಿಧಾನಗತಿಯಲ್ಲಿ ಇಲ್ಲಿನ ಪ್ರಾಚೀನ ದೇಗುಲಗಳು ಹಾಗೂ ಐತಿಹಾಸಿಕ ಸ್ಥಳಗಳನ್ನು ನಾಶಪಡಿಸುತ್ತಿದೆ. ಪಲ್ಮಿರ ನಗರದಲ್ಲಿರುವ ಬಾಲ್ ಶಮೀನ ದೇಗುಲದ ಮೇಲೆ ದಾಳಿ ಮಾಡಿರುವ ಉಗ್ರರು, ಇಲ್ಲಿನ ಐತಿಹಾಸಿಕ ಪ್ರದೇಶಗಳನ್ನು ನಾಶಪಡಿಸಿದೆ. ಬಾಲ್ ಶಮೀನ ದೇಗುಲವನ್ನು ರೋಮನ್ ಆಳ್ವಿಕೆಯ ಸಮಯದಲ್ಲಿ ನಿರ್ಮಿಸಲಾಗಿತ್ತು. ಇದನ್ನು ಇಂದಿಗೂ ಯುನೆಸ್ಕೋ ಮಹೋನ್ನತ ಸಾರ್ವತ್ರಿಕ ಮೌಲ್ಯ ಎಂದು ಗುರ್ತಿಸಲಾಗುತ್ತಿದೆ.

ಸಿರಿಯಾದ ಐತಿಹಾಸಿಕ ದೇಗುಲವಾದ ಬಾಲ್ ಶಮೀನ ದೇಗುಲದ ಮೇಲೆ ನಿನ್ನೆ ದಾಳಿ ಮಾಡಿದ ಇಸಿಸ್ ಉಗ್ರರು ದೇಗುಲದೊಳಗೆ ಅಪಾರ ಪ್ರಮಾಣದ ಸ್ಪೋಟಕಗಳನ್ನು ತುಂಬಿಸಿ ನಂತರ ಇದನ್ನು ಸ್ಪೋಟಿಸಿದ್ದಾರೆ. ಸ್ಪೋಟದ ಪ್ರಮಾಣ ತೀವ್ರವಾದ್ದರಿಂದ ದೇಗುಲ ಸಂಪೂರ್ಣವಾಗಿ ನಾಶವಾಗಿದೆ ಎಂದು ತಿಳಿದುಬಂದಿದೆ.

ಐತಿಹಾಸಿಕ ದೇಗುಲವಾದ ಈ ಸ್ಥಳಕ್ಕೆ ಪ್ರತೀವರ್ಷ 150,000 ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ಈ ದೇಗುಲವನ್ನು ಇದೀಗ ಉಗ್ರರು ಸ್ಮಶಾನ ತಾಣದಂತೆ ಪರಿವರ್ತಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com