
ಬೀಜಿಂಗ್: 2ನೇ ವಿಶ್ವಯುದ್ಧದ 70 ನೇ ವಾರ್ಷಿಕೋತ್ಸವದ ಅಂಗವಾಗಿ ಚೀನಾದಲ್ಲಿ ಸಾಮೂಹಿಕ ವೈಮಾನಿಕ ಮಿಲಿಟರಿ ಪರೇಡ್ ನಡೆಸಲಿದೆ. ಈ ಹಿನ್ನೆಲೆಯಲ್ಲಿ ವಿಮಾನಗಳ ಸುರಕ್ಷತೆಗಾಗಿ ಗಸ್ತು ತಿರುಗಲು ಹದ್ದು ಮತ್ತು ಕೋತಿಗಳನ್ನು ನಿಯೋಜಿಸಿದೆ.
ಮಿಲಿಟರಿ ಸಿಬ್ಬಂದಿ ಈ ಪ್ರಾಣಿ ಮತ್ತು ಪಕ್ಷಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಮರಗಳಲ್ಲಿ ಪಕ್ಷಿಗಳ ಗೂಡುಗಳನ್ನು ಕೆಡವಲು ಕೋತಿಗಳಿಗೆ ತರಬೇತಿ ನೀಡಲಾಗುತ್ತಿದೆ. ಇನ್ನು ಆಕಾಶದಲ್ಲಿ ಗಸ್ತು ತಿರುಗಲು ಹದ್ದುಗಳಿಗೂ ತರಬೇತಿ ನೀಡಲಾಗುತ್ತಿದೆ ಎಂದು ಚೀನಾದ ಪತ್ರಿಕೆಯೊಂದು ವರದಿ ಮಾಡಿದೆ.
ವೈಮಾನಿಕ ಪ್ರದರ್ಶನ ನಡೆಯುವ ಕಾರಿಡಾರ್ ನಲ್ಲಿ ಹದ್ದು ಹಾಗೂ ಮಂಗಗಳನ್ನು ನಿಯೋಜಿಸಲಾಗುತ್ತದೆ. ಪ್ರತಿ ದಿನ 5 ಮಂಗಗಳು ಮಿಲಿಟರಿ ಅಧಿಕಾರಿಗಳ ಜೊತೆ ಸೇರಿಕೊಂಡು ಸುಮಾರು 60 ಹಕ್ಕಿಹಳ ಗೂಡನ್ನು ನಾಶ ಪಡಿಸುತ್ತಿವೆ. ಇನ್ನು ವೈಮಾನಿಕ ಪ್ರದರ್ಶನ ಮುಗಿಯುವವರೆಗೂ ಪಾರಿವಾಳ ಹಾರಾಡಲು ಬಿಡದಂತೆ ಸ್ಥಳೀಯ ನಾಗರಿಕರಿಗೆ ಮಿಲಿಟರಿ ಅಧಿಕಾರಿಗಳು ಸೂಚಿಸಿದ್ದಾರೆ.
ಸೆಪ್ಟಂಬರ್ 3 ರಂದು ನಡೆಯುವ ಈ ವೈಮಾನಿಕ ಮಿಲಿಟರಿ ಪರೇಡ್ ನಲ್ಲಿ ಪಾಕಿಸ್ತಾನ ಸೇರಿದಂತೆ ಪ್ರಪಂಚದ 17 ದೇಶಗಳ ಸುಮಾರು ಒಂದು ಸಾವಿರ ವಿದೇಶಿ ತಂಡಗಳು ಭಾಹವಹಿಸಲಿವೆ.
Advertisement