ಪುತ್ರಿ ಜನನ: ೯೯% ಶೇರುಗಳನ್ನು ದಾನ ಮಾಡುವುದಾಗಿ ಘೋಷಿಸಿದ ಫೇಸ್ಬುಕ್ ಸಿ ಇ ಒ

ತಮ್ಮ ಒಡೆತನದಲ್ಲಿರುವ ೯೯% ಫೇಸ್ಬುಕ್ ಸಂಸ್ಥೆಯ ಶೇರುಗಳನ್ನು ದಾನ ಧರ್ಮದ ಚಟುವಟಿಕೆಗಳಿಗಾಗಿ ನಿಯೋಗಿಸುವುದಾಗಿ ಸಂಸ್ಥಾಪಕ ಮಾರ್ಕ್ ಜ್ಯೂಕರ್ ಬರ್ಗ್
ವಾರದ ಹಿಂದೆ ಜನಿಸಿದ ಹೆಣ್ಣು ಮಗುವಿನೊಂದಿಗೆ ಮಾರ್ಕ್ ಜ್ಯೂಕರ್ ಬರ್ಗ್ ದಂಪತಿ
ವಾರದ ಹಿಂದೆ ಜನಿಸಿದ ಹೆಣ್ಣು ಮಗುವಿನೊಂದಿಗೆ ಮಾರ್ಕ್ ಜ್ಯೂಕರ್ ಬರ್ಗ್ ದಂಪತಿ

ಸ್ಯಾನ್ ಫ್ರಾನ್ಸಿಸ್ಕೊ: ತಮ್ಮ ಒಡೆತನದಲ್ಲಿರುವ ೯೯% ಫೇಸ್ಬುಕ್ ಸಂಸ್ಥೆಯ ಶೇರುಗಳನ್ನು ದಾನ ಧರ್ಮದ ಚಟುವಟಿಕೆಗಳಿಗಾಗಿ ನಿಯೋಗಿಸುವುದಾಗಿ ಸಂಸ್ಥಾಪಕ ಮಾರ್ಕ್ ಜ್ಯೂಕರ್ ಬರ್ಗ್ ಮತ್ತು ಅವರ ಪತ್ನಿ ಮಂಗಳವಾರ ಘೋಷಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮಾರ್ಕ್ ಜ್ಯೂಕರ್ ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಕಿಲ್ಲ ಚ್ಯಾನ್ ಹೊಂದಿರುವ ಶೇರುಗಳ ಮೌಲ್ಯ ಸುಮಾರು ೪೫ ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ಕಳೆದ ವಾರ ಈ ದಂಪತಿಗಳಿಗೆ ಜನಿಸಿದ ಪುತ್ರಿಗೆ 'ನಮ್ಮ ಮಗಳಿಗೆ ಪತ್ರ' ಎಂದು ಜ್ಯೂಕರ್ ಬರ್ಗ್ ಈ ವಿಷಯವನ್ನು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಸರ್ಕಾರ ನೀತಿಗಳ ತಿದ್ದುಪಡಿ, ಚಾರಿಟಿ ಸಂಸ್ಥೆಗಳ ಮೂಲಕ ತಮ್ಮ ಜೀವಿತಾವಧಿಯಲ್ಲಿ ಇದನ್ನು ದಾನ ಮಾಡುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com