ಕ್ಯಾಲಿಫೋರ್ನಿಯಾ ಶೂಟೌಟ್ ರೂವಾರಿಗಳು ಪಾಕಿಸ್ತಾನ ಮೂಲದ ದಂಪತಿ!

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದ ಶೂಟೌಟ್‌ನ ರೂವಾರಿಗಳು ಪಾಕಿಸ್ತಾನ ಮೂಲದ ದಂಪತಿಗಳು ಎಂದು ಫೆಡರಲ್ ಬ್ಯೂರೋ ಆಫ್...
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದ ಶೂಟೌಟ್‌
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದ ಶೂಟೌಟ್‌
ಸ್ಯಾನ್ ಬೆರ್ನಾಡ್ರಿನೋ: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದ ಶೂಟೌಟ್‌ನ ರೂವಾರಿಗಳು ಪಾಕಿಸ್ತಾನ ಮೂಲದ ದಂಪತಿಗಳು ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ( ಎಫ್‌ಬಿಐ) ಪತ್ತೆ ಹಚ್ಚಿದೆ. 
ಬುಧವಾರ ಸ್ಯಾನ್ ಬೆರ್ನಾಡ್ರಿನೋದ ಇನ್‌ಲ್ಯಾಂಡ್ ರೀಜಿನಲ್ ಸೆಂಟರ್ ನಲ್ಲಿ ನಡೆದ ಈ ಶೂಟೌಟ್ ನಲ್ಲಿ 14 ಮಂದಿ ಹತ್ಯೆಗೀಡಾಗಿದ್ದರು. ಪಾಕಿಸ್ತಾನ ಮೂಲದ ಸಯೀದ್ ರಿಜ್ವಾನ್ ಫರೂಕ್ ಮತ್ತು ಆತನ ಪತ್ನಿ ತಶ್ಫೀನ್ ಮಲಿಕ್ ಈ ಹತ್ಯಾಕಾಂಡದ ರೂವಾರಿಗಳಾಗಿದ್ದು,  ಶೂಟೌಟ್‌ನಲ್ಲಿ ಪೊಲೀಸರು ಇವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.
ಶೂಟೌಟ್ ಬಗ್ಗೆ ತನಿಖೆ ನಡೆಸಿದ ಎಫ್‌ಬಿಐ ರಿಜ್ವಾನ್ ಮನೆಯಿಂದ 12 ಪೈಪ್ ಬಾಂಬ್ ಮತ್ತು ಇನ್ನಿತರ ಮಾರಕಾಯುಧಗಳನ್ನು ಪತ್ತೆ ಹಚ್ಚಿದೆ.
ಸ್ಯಾನ್ ಬೆರ್ನಾಡ್ರಿನೋದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪೊಲೀಸ್ ಮುಖ್ಯಸ್ಥ ಜೆರೋಡ್ ಬರ್ಗಾನ್, ರೆಡ್ ಲ್ಯಾಂಡ್ ಪಕ್ಕವಿರುವ ಮನೆಯಿಂದ ಫರೂಕ್ ಮತ್ತು ಮಲಿಕ್ ಅವರು ಬಳಸುತ್ತಿದ್ದ ಫ್ಲಾಶ್ ಡ್ರೈವ್, ಕಂಪ್ಯೂಟರ್ ಮತ್ತು ಸೆಲ್‌ಫೋನ್‌ಗಳನ್ನು ಪತ್ತೆ ಹಚ್ಚಲಾಗಿದೆ ಎಂದಿದ್ದಾರೆ.
ಈ ಶೂಟೌಟ್‌ನಲ್ಲಿ ಗಾಯಗೊಂಡವರ ಸಂಖ್ಯೆ 21ಕ್ಕೇರಿದೆ ಎಂದ ಪೊಲೀಸರು ಈ ಶೂಟೌಟ್ ಗೆ ಕಾರಣ ಏನು ಎಂಬುದು ಇಲ್ಲಿವರೆಗೆ ತಿಳಿದು ಬಂದಿಲ್ಲ ಎಂದಿದ್ದಾರೆ.
ಮೂಲತಃ ಅಮೆರಿಕದ ಸಯೀದ್ ರಿಜ್ವಾನ್ ಫರೂಕ್ (28) ಆರೋಗ್ಯ ಸೇವಾ ಸಿಬ್ಬಂದಿಯಾಗಿದ್ದು,  ಪಾಕಿಸ್ತಾನ ಮೂಲದ ತಶ್ಫೀನ್ ಮಲೀಕ್ (27) ಎಂಬಾಕೆಯನ್ನು ಮದುವೆಯಾಗಿದ್ದನು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com