ಅಮೆರಿಕ ಪಾಕ್ ಗೆ ನೀಡುವ ಫೈಟರ್ ಜೆಟ್ ಗಳು ಬಳಕೆಯಾಗುವುದು ಭಾರತದ ವಿರುದ್ಧ: ಪಾಕ್ ಮಾಜಿ ರಾಯಭಾರಿ

ಅಮೆರಿಕ ಪಾಕಿಸ್ತಾನಕ್ಕೆ ಮಾರಾಟ ಮಾಡುವ ಎಫ್-16 ಫೈಟರ್ ಜೆಟ್ ಭಾರತದ ವಿರುದ್ಧ ಬಳಕೆಯಾಗಲಿವೆ ಎಂದು ಅಮೆರಿಕ ಸರ್ಕಾರಕ್ಕೆ ಮಾಜಿ ರಾಯಭಾರಿ ಎಚ್ಚರಿಕೆ ನೀಡಿದ್ದಾರೆ.
ಎಫ್-16 ಫೈಟರ್ ಜೆಟ್
ಎಫ್-16 ಫೈಟರ್ ಜೆಟ್

ವಾಷಿಂಗ್ಟನ್: ಅಮೆರಿಕ ಪಾಕಿಸ್ತಾನಕ್ಕೆ ಮಾರಾಟ ಮಾಡುವ ಎಫ್-16 ಫೈಟರ್ ಜೆಟ್  ಭಾರತದ ವಿರುದ್ಧ ಬಳಕೆಯಾಗಲಿವೆ ಎಂದು ಅಮೆರಿಕ ಸರ್ಕಾರಕ್ಕೆ ಪಾಕಿಸ್ತಾನದ ಮಾಜಿ ರಾಯಭಾರಿ ಎಚ್ಚರಿಕೆ ನೀಡಿದ್ದಾರೆ.  
ಪಾಕಿಸ್ತಾನ ಅಮೆರಿಕದಿಂದ ಖರೀದಿಸುವ ಎಫ್-16 ಜೆಟ್ ಗಳು ಭಯೋತ್ಪಾದಕರ ವಿರುದ್ಧ ಬಳಕೆಯಾಗುವುದಿಲ್ಲ, ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಸಹಕಾರ ನೀಡದೇ ಪಾಕಿಸ್ತಾನಕ್ಕೆ ಎಫ್-16 ಫೈಟರ್ ಜೆಟ್ ಗಳನ್ನು ಪೂರೈಕೆ ಮಾಡುವುದರಿಂದ ದಕ್ಷಿಣ ಏಷ್ಯಾದಲ್ಲಿ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ಅಮೆರಿಕಾಗೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಕಾಂಗ್ರೆಸ್ ನ ಅಧಿವೇಶನ ಪ್ರಾರಂಭವಾಗುವುದಕ್ಕೂ ಮುನ್ನ ಹುಸೇನ್ ಹಕ್ಕಾನಿ ಅಮೆರಿಕಾಗೆ ಎಚ್ಚರಿಕೆ ನೀಡಿದ್ದು, ಭಯೋತ್ಪಾದನೆ, ಜಿಹಾದ್ ನ್ನು ನಿರ್ಮೂಲನೆ ಮಾಡಲು ವಿಫಲವಾಗಿರುವುದು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಕೊರತೆ ಇಲ್ಲ ಬದಲಾಗಿ ಇಚ್ಛಾ ಶಕ್ತಿ ಕೊರತೆ ಇದೆ ಎಂಬುದನ್ನು ತೋರಿಸುತ್ತದೆ ಎಂದು ಹುಸೇನ್ ಹಕ್ಕಾನಿ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ತನ್ನ ಸಿದ್ಧಾಂತವನ್ನು ಬದಲಾಯಿಸಿಕೊಳ್ಳುವವರೆಗೂ ಅಮೆರಿಕ ಪೂರೈಕೆ ಮಾಡುವ ಶಸ್ತ್ರಾಸ್ತ್ರಗಳು ಭಾರತದ ವಿರುದ್ಧ ಪ್ರಯೋಗವಾಗಲು ಉಪಯೋಗವಾಗುದೇ ಹೊರತು ಭಯೋತ್ಪಾದನೆ ವಿರುದ್ಧ ಅಲ್ಲ ಎಂದು  ಹುಸೇನ್ ಹಕ್ಕಾನಿ  ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com