ಬೀಜಿಂಗ್: ಕಳೆದ ವರ್ಷ ಕ್ಸಿ ಜಿನ್‍ಪಿಂಗ್ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಅವರ ಹೆಸರನ್ನು ದೂರದರ್ಶನದ ವಾರ್ತಾ ವಾಚಕಿ ಇಲೆವೆನ್ ಜಿನ್‍ಪಿಂಗ್ ಎಂದು ಓದಿ ಕೆಲಸ ಕಳೆದುಕೊಂಡಿದ್ದರು.
ಅದೇ ಮಾದರಿಯ ತಪ್ಪು ಚೀನಾದಲ್ಲಿ ನಡೆದಿದೆ. ಕಳೆದ ವಾರ ಜೊಹಾನ್ಸ್‍ಬರ್ಗ್‍ನಲ್ಲಿ ಚೀನಾ-ಆಫ್ರಿಕಾ ಶೃಂಗಸಭೆ ಏರ್ಪಟ್ಟಿತ್ತು. ಈ ಸಭೆಯಲ್ಲಿ ಕ್ಸಿ ಜಿನ್ ಪಿಂಗ್ ಅವರು ಭಾಷಣ ಮಾಡಿದ್ದರು.
ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ಭಾಷಣ(Zhi ci) ವನ್ನು ರಾಜಿನಾಮೆ (ci zhi) ಎಂದು ಚೀನಾದ ನ್ಯೂಸ್ ಏಜೆನ್ಸಿ ಪತ್ರಕರ್ತರು ಟೈಪ್ ಮಾಡಿದ್ದರು. ಈ ಸಂಬಂಧ ನಾಲ್ವರನ್ನು ಅಮಾನತು ಮಾಡಲಾಗಿದೆ. ಆನ್‍ಲೈನ್ ಆವೃತ್ತಿಯಲ್ಲಿ ತಪ್ಪು ಸರಿಪಡಿಸಲಾಗಿದ್ದರೂ ನಾಲ್ವರನ್ನು ಅಮಾನತು ಮಾಡಲಾಗಿದೆ.