ಬ್ಲೇಡ್ ರನ್ನರ್‍ಗೆ ಜಾಮೀನು

ರೂಪದರ್ಶಿ ಹಾಗೂ ಗೆಳತಿ ರೀವಾ ಸ್ಟೀನ್‍ಕಾಂಪ್ ಕೊಲೆ ಕೇಸಿನಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಇತ್ತೀಚೆಗಷ್ಟೇ ದೋಷಿ ಎಂದು ತೀರ್ಪಿಗೆ ಗುರಿಯಾದ ಬ್ಲೇಡ್ ರನ್ನರ್...
ಆಸ್ಕರ್ ಪಿಸ್ಟೋರಿಯಸ್
ಆಸ್ಕರ್ ಪಿಸ್ಟೋರಿಯಸ್
Updated on
ಪ್ರಿಟೋರಿಯಾ: ರೂಪದರ್ಶಿ ಹಾಗೂ ಗೆಳತಿ ರೀವಾ ಸ್ಟೀನ್‍ಕಾಂಪ್ ಕೊಲೆ ಕೇಸಿನಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಇತ್ತೀಚೆಗಷ್ಟೇ ದೋಷಿ ಎಂದು ತೀರ್ಪಿಗೆ ಗುರಿಯಾದ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ ಗೆ ಜಾಮೀನು ಸಿಕ್ಕಿದೆ. 
ಕೊಲೆ ಪ್ರಕರಣದ ಅಂತಿಮ ತೀರ್ಪು ಮುಂದಿನ ವರ್ಷ ಏಪ್ರಿಲ್ 18ರಂದು ಪ್ರಕಟವಾಗಲಿದ್ದು, ಅಲ್ಲೀವರೆಗೂ ಆತನ ಅಂಕಲ್ ಮನೆಯಲ್ಲಿ ಗೃಹಬಂಧನದಲ್ಲಿರಬಹುದು ಎಂದು ಪ್ರಿಟೋರಿ ಯಾ ಉಚ್ಚ ನ್ಯಾಯಾಲಯ ತಿಳಿಸಿತು. 
ಜಾಮೀ ನು ಪಡೆಯಲು ನ್ಯಾಯಾಲಯಕ್ಕೆ ಆಸ್ಕರ್ ರು. 45ಸಾವಿರ ಮೊತ್ತದ ಬಾಂಡ್ ನೀಡಬೇಕಾಯಿತು. ಈ ಕೊಲೆ ಕೇಸಿನಲ್ಲಿ ಪಿಸ್ಟೋರಿಯಸ್ ಕನಿಷ್ಟ 15 ವರ್ಷಗಳ ಸೆರೆವಾಸಕ್ಕೆ ಗುರಿಯಾಗಿದ್ದು, ಅಂತಿಮ ತೀರ್ಪಿನ ಮೇಲೆ ಅವರ ಮುಂದಿನ ಭವಿಷ್ಯ ನಿರ್ಧರಿತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com