ಫೇಸ್ಬುಕ್ ಗೆ ಮುಸ್ಲಿಮರಿಗೆ ಸದಾ ಸ್ವಾಗತ: ಮಾರ್ಕ್ ಜ್ಯೂಕರ್ ಬರ್ಗ್

ಅಮೆರಿಕಾದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಅಮೆರಿಕಾಕ್ಕೆ ಬರುವ ಮುಸ್ಲಿಮರಿಗೆ ಕಡಿವಾಣ ಹಾಕಬೇಕು ಎಂದಿದ್ದ ಹೇಳಿಕೆಗೆ
ಫೇಸ್ಬುಕ್ ಸಿಇಒ ಮಾರ್ಕ್ ಜ್ಯೂಕರ್ ಬರ್ಗ್
ಫೇಸ್ಬುಕ್ ಸಿಇಒ ಮಾರ್ಕ್ ಜ್ಯೂಕರ್ ಬರ್ಗ್

ನ್ಯೂಯಾರ್ಕ್: ಅಮೆರಿಕಾದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಅಮೆರಿಕಾಕ್ಕೆ ಬರುವ ಮುಸ್ಲಿಮರಿಗೆ ಕಡಿವಾಣ ಹಾಕಬೇಕು ಎಂದಿದ್ದ ಹೇಳಿಕೆಗೆ ಉತ್ತರದಂತಿರುವ ಫೇಸ್ಬುಕ್ ಸಿಇಒ ಮಾರ್ಕ್ ಜ್ಯೂಕರ್ ಬರ್ಗ್ ಹೇಳಿಕೆಯಲ್ಲಿ ಅವರು ಸಾಮಜಿಕ ದೈತ್ಯ ಜಾಲತಾಣ ಫೇಸ್ಬುಕ್ ಗೆ ಮುಸ್ಲಿಮರಿಗೆ ಸದಾ ಸ್ವಾಗತ ಎಂದಿದ್ದಾರೆ.

ಬುಧವಾರ ಅವರು ಬರೆದಿರುವ ಫೇಸ್ಬುಕ್ ಪೋಸ್ಟ್ ನಲ್ಲಿ "ನಮ್ಮ ಸಮುದಾಯದ ನಡುವೆ ಹಾಗೂ ವಿಶ್ವದಲ್ಲಿನ ಮುಸ್ಲಿಮರಿಗೆ ಬೆಂಬಲ ಸೂಚಿಸಲು ನನ್ನ ಧ್ವನಿ ಎತ್ತುತ್ತೇನೆ" ಎಂದಿದ್ದಾರೆ.

"ಪ್ಯಾರಿಸ್ ದಾಳಿಯ ನಂತರ ಮತ್ತು ಈ ವಾರದ ದ್ವೇಷದ ನಂತರ ಯಾರೋ ಮಾಡಿದ ಕೃತ್ಯಕ್ಕೆ ಎಲ್ಲ ಮುಸ್ಲಿಮರ ಮೇಲೆ ಒತ್ತಡ ಹಾಕುತ್ತಿದ್ದಾರೆ" ಎಂದು ಕೂಡ ಅವರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಹೆಣ್ಣು ಮಗುವಿನ ಜನನದ ಖುಷಿಯಲ್ಲಿರುವ ಜ್ಯೂಕರ್ ಬರ್ಗ್ "ಸಿನಿಕತೆಗೆ ಒಳಗಾಗದಂತೆ" ಕರೆ ನೀಡಿದ್ದಾರೆ.

"ನೀವು ಈ ಸಮುದಾಯದಲ್ಲಿ ಮುಸ್ಲಿಮರಾಗಿದ್ದಾರೆ, ಫೇಸ್ಬುಕ್ ನ ನಾಯಕನಾಗಿ ನಿಮ್ಮನ್ನು ಇಲ್ಲಿಗೆ ಸದಾ ಸ್ವಾಗತಿಸುತ್ತೇನೆ. ನಿಮ್ಮ ಹಕ್ಕುಗಳಿಗಾಗಿ ಹೋರಾಡಿ, ನಿಮಗಾಗಿ ಶಾಂತಿಯುತ ಮತ್ತು ಸುರಕ್ಷಿತ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತೇನೆ" ಎಂದು ಅವರು ಬರೆದಿದ್ದಾರೆ.

"ನಾನು ಜ್ಯೂ ಧರ್ಮೀಯನಾಗಿ, ಯಾವುದೇ ಸಮುದಾಯದ ಮೇಲೆ ದಾಳಿಯಾದರೂ ಅದರ ವಿರುದ್ಧ ಧ್ವನಿ ಎತ್ತುವಂತೆ ನನ್ನ ಪೋಷಕರು ಹೇಳಿಕೊಟ್ಟಿದ್ದಾರೆ. ಈ ದಾಳಿ ನಿಮ್ಮ ವಿರುದ್ಧ ಅಲ್ಲವಾದರೂ, ಸ್ವಾತಂತ್ರ್ಯದ ಮೇಲಿನ ದಾಳಿಯ ಸಮಯದಲ್ಲಿ ಎಲ್ಲರಿಗು ತೊಂದರೆಯಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.

ನವೆಂಬರ್ ೨೦೧೬ ರಂದು ನಡೆಯಲಿರುವ ಅಧ್ಯಕ್ಷ ಚುನಾವಣೆಗೆ ಮುಂಚೂಣಿಯಲ್ಲಿರುವ ರಿಪಬ್ಲಿಕನ್ ಪಕ್ಷದ ಟ್ರಂಪ್ ಅಮೆರಿಕಾಕ್ಕೆ ಮುಸ್ಲಿಮರು ವಲಸೆ ಬರುವುದನ್ನು ತಡೆಯಬೇಕು ಎಂದು ಪ್ರಸ್ತಾಪಿಸಿದ್ದು ಹಲವರ ಟೀಕೆಗೆ ಗುರಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com