ದ್ವಿಪಕ್ಷೀಯ ಮಾತುಕತೆಯ ಜಂಟಿ ಹೇಳಿಕೆ ಭಾರತದ ಪರವಾಗಿತ್ತು: ಪಾಕ್ ಪಕ್ಷಗಳ ಆರೋಪ

ಭಾರತ- ಪಾಕ್ ನಡುವೆ ದ್ವಿಪಕ್ಷೀಯ ಮಾತುಕತೆ ಪ್ರಾರಂಭವಾಗಿದೆಯಾದರೂ, ದ್ವಿಪಕ್ಷೀಯ ಮಾತುಕತೆ ವಿಸ್ತೃತವಾಗಿ ಮುಂದುವರೆಯುವ ಬಗ್ಗೆ ಪಾಕಿಸ್ತಾನದ ರಾಜಕೀಯ ಪಕ್ಷಗಳು ಅನುಮಾನ ವ್ಯಕ್ತಪಡಿಸಿವೆ.
ಪಾಕಿಸ್ತಾನ
ಪಾಕಿಸ್ತಾನ

ಕರಾಚಿ: ಭಾರತ- ಪಾಕ್ ನಡುವೆ ದ್ವಿಪಕ್ಷೀಯ ಮಾತುಕತೆ ಪ್ರಾರಂಭವಾಗಿದೆಯಾದರೂ, ದ್ವಿಪಕ್ಷೀಯ ಮಾತುಕತೆ ವಿಸ್ತೃತವಾಗಿ ಮುಂದುವರೆಯುವ ಬಗ್ಗೆ ಪಾಕಿಸ್ತಾನದ ರಾಜಕೀಯ ಪಕ್ಷಗಳು ಅನುಮಾನ ವ್ಯಕ್ತಪಡಿಸಿವೆ.
ದ್ವಿಪಕ್ಷೀಯ ಮಾತುಕತೆ ಬಳಿಕ ಬಿಡುಗಡೆಯಾದ ಜಂಟಿ ಹೇಳಿಕೆ ಭಾರತದ ಪರವಾಗಿದೆ ಎಂದು ಪಾಕಿಸ್ತಾನದ ರಾಜಕೀಯ ಪಕ್ಷಗಳು ಆರೋಪಿಸಿವೆ. " ಭಾರತ-ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಮಾತುಕತೆ ಪ್ರಾರಂಭವಾಗಿರುವುದು ಸ್ವಾಗತಾರ್ಹ. ಆದರೆ ಜಂಟಿ ಹೇಳಿಕೆ ಭಾರತದ ನಿಲುವನ್ನು ಬೆಂಬಲಿಸಿದೆ ಎಂದು ಪಾಕಿಸ್ತಾನದ ರಾಜಕೀಯ ಪಕ್ಷದ ಮುಖಂಡ ಶಿರೀನ್ ಮಝಾರಿ ಆರೋಪಿಸಿದ್ದಾರೆ.
ಮುಂಬೈ ದಾಳಿ ಪ್ರಕರಣದ ವಿಚಾರಣೆ ಬಗ್ಗೆ ಭಾರತ ಪ್ರಸ್ತಾಪಿಸಿರುವುದನ್ನು ಪಾಕಿಸ್ತಾನ ಹೇಳಿದೆ. ಆದರೆ ಸಂಜೋತಾ ಎಕ್ಸ್ ಪ್ರೆಸ್ ಪ್ರಕರಣ, ಕಾಶ್ಮೀರ ವಿಷಯದ ಬಗ್ಗೆ ಮಾತುಕತೆ ನಡೆದಿರುವ ಬಗ್ಗೆ ಸುಳಿವೇ ಇಲ್ಲ ಎಂದು ಜೆಯುಐ-ಎಫ್ ಮುಖ್ಯಸ್ಥ ಮೌಲಾನಾ ಫಲ್ಜೌರ್ ರೆಹಮಾನ್ ಹೇಳಿದ್ದು ಈ ಬಗ್ಗೆ ಪಾಕಿಸ್ತಾನ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. 
ಈ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಸಚಿವ ರೈಜ್ ಪಿರ್ಜಾದಾ ಈ ಬಗ್ಗೆ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com