ಸೌದಿಯಲ್ಲಿ ಮೊದಲ ಬಾರಿಗೆ ಮಹಿಳೆಯರಿಂದ ಮತದಾನ

ಜಗತ್ತಿನಲ್ಲೇ ಮಹಿಳೆಯರ ಮೇಲೆ ಅತ್ಯಂತ ಹೆಚ್ಚು ನಿರ್ಬಂಧವಿರುವ ದೇಶ ಎಂಬ ಹಣೆಪಟ್ಟಿ ಹೊತ್ತಿರುವ ಸೌದಿಯಲ್ಲಿ ಈಗ ಮಹಿಳಾಸ್ವಾತಂತ್ರ್ಯದ ತಂಗಾಳಿ ಬೀಸಲಾರಂಭಿಸಿದೆ...
ಮೊದಲಬಾರಿಗೆ ಸೌದಿಯಲ್ಲಿ ಮಹಿಳೆಯಿಂದ ಮತದಾನ (ಚಿತ್ರಕೃಪೆ: ರಾಯಿಟರ್ಸ್)
ಮೊದಲಬಾರಿಗೆ ಸೌದಿಯಲ್ಲಿ ಮಹಿಳೆಯಿಂದ ಮತದಾನ (ಚಿತ್ರಕೃಪೆ: ರಾಯಿಟರ್ಸ್)

ಸೌದಿ: ಜಗತ್ತಿನಲ್ಲೆೀ ಮಹಿಳೆಯರ ಮೇಲೆ ಅತ್ಯಂತ ಹೆಚ್ಚು ನಿರ್ಬಂಧವಿರುವ ದೇಶ ಎಂಬ ಹಣೆಪಟ್ಟಿ ಹೊತ್ತಿರುವ ಸೌದಿಯಲ್ಲಿ ಈಗ ಮಹಿಳಾಸ್ವಾತಂತ್ರ್ಯದ ತಂಗಾಳಿ ಬೀಸಲಾರಂಭಿಸಿದೆ.

ಈ ಬಾರಿಯ ಚುನಾವಣೆಯಲ್ಲಿ ಸಿuಉೀಯರಿಗೆ ಮತ ದಾನಕ್ಕೆ ಹಾಗೂ ಸ್ಪರ್ಧೆಗೆ ಅವಕಾಶ ನೀಡಲಾಗಿದ್ದು, ಶನಿವಾರ ಮತದಾನ ನಡೆದಿದೆ. ಇಲ್ಲಿನ ಮಹಿಳೆಯರಿಗೆ ಸದ್ಯಕ್ಕೆ ಚುನಾವಣಾ ಸ್ವಾತಂತ್ರ್ಯ ಸಿಕ್ಕಂತಾಗಿದ್ದು, ಈ ಬಾರಿಯ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ 900ಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 284 ಕ್ಷೇತ್ರಗಳಿಗಾಗಿ ಸುಮಾರು 6000 ಪುರುಷರೂ ಸ್ಪರ್ಧೆಯಲ್ಲಿದ್ದಾರೆ. ಹಾಗಾಗಿ ಈ ಬಾರಿ ಚುನಾವಣೆ ವಿಭಿನ್ನ ರಂಗು ಪಡೆದಿದೆ. ಈ ಕೊನೆಕ್ಷಣದ ಘೋಷಣೆಯಿಂದಾಗಿ ಹಲವು ಮಹಿಳಾ ಅಭ್ಯರ್ಥಿಗಳಿಗೆ ನೋಂದಣಿ ಅಸಾಧ್ಯವಾಗಿದೆ. ಹೀಗಾಗಿ ಹೆಚ್ಚು ಮಂದಿ ಮಹಿಳೆಯರು ಮತದಾನದಲ್ಲಿ ಪಾಲ್ಗೊಳ್ಳುವ ಹಾಗೂ ಮಹಿಳಾ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳು ಕ್ಷೀಣಿಸಿದೆ.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ 18ವರ್ಷ ಹಾಗೂ ಮೇಲ್ಪಟ್ಟ 15 ಲಕ್ಷದಷ್ಟು ಪ್ರಜೆಗಳು ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 1.19ಲಕ್ಷ ಮಂದಿ ಮಹಿಳೆಯರು.  ಚುನಾವಣೆಯಲ್ಲಿ ಸ್ಪರ್ಧಿಸುವ ಸ್ವಾತಂತ್ರ್ಯ ಸಿಕ್ಕಿದ್ದರಿಂದ ಮಹಿಳೆಯರು ಭಾರಿ ಸಂತಸಗೊಂಡಿದ್ದು, ಗೆಲುವಿಗಿಂತಲೂ ಅವಕಾಶ ದೊರೆತಿರುವುದೇ ದೊಡ್ಡ ಗೆಲುವೆನಿಸಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com