
ವಾಶಿಂಗ್ಟನ್: ಸಿಖ್ ಧರ್ಮದ ಸಂಸ್ಥಾಪಕ ಗುರ್ ನಾನಕ್ ಅವರ ಜಯಂತಿಯನ್ನು ಅಮೆರಿಕಾದ ಶ್ವೇತಭವನ ಆಚರಿಸಿದ್ದು ಸಿಖ್ ಸಮುದಾಯಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.
"ನಿಮ್ಮ ಜೊತೆಗೆ, ನಿಮ್ಮ ಹಿಂದೆ ಮತ್ತು ನಿಮ್ಮ ಬೆಂಬಲಕ್ಕೆ ಅಧ್ಯಕ್ಷ ಒಬಾಮಾ ಇದ್ದಾರೆ. ನಮ್ಮ ದೇಶದ ದೊಡ್ಡತನಕ್ಕೆ ಕಾರಣವೇನು ಎಂದು ಅಮೆರಿಕನ್ನರಿಗೆ ನೆನಪಿಸುವ ಜವಾಬ್ದಾರಿ ನಮ್ಮೆಲ್ಲರಿಗಿದೆ" ಎಂದು ಒಬಾಮಾ ಅವರ ಹಿರಿಯ ಸಲಹೆಗಾರ್ತಿ ವ್ಯಾಲೆರಿ ಜ್ಯಾರೆಟ್, ನೆರೆದಿದ್ದ ಸಿಖ್ ಸಮುದಾಯವನ್ನು ಕುರಿತು ಹೇಳಿದ್ದಾರೆ.
ಸಿಖ್ ಪುರುಷರು, ಮಹಿಳೆಯರು ಮತ್ತು ಮಕ್ಕಳು ನೆರೆದಿದ್ದ ಕೊಠಡಿಯಲ್ಲಿ ಮಾತನಾಡಿದ ಜ್ಯಾರೆಟ್ 'ಹ್ಯಾಪಿ ಗುರ್ಪುರಬ್' ಎಂದು ಎಲ್ಲರಿಗೂ ಅಭಿನಂದಿಸಿದ್ದಾರೆ.
ಸಿಖ್ ಕೌನ್ಸಿಲ್ ಫಾರ್ ರಿಲಿಜಿಯನ್ ಅಂಡ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಡಾ. ರಾಜ್ವಂತ್ ಸಿಂಗ್ ಅವರು "ಅಧ್ಯಕ್ಷ ಒಬಾಮಾ ತಂಡದವರಿಂದ ಬಂದ ಬೆಂಬಲಪೂರಕ ಹಾಗೂ ಶಕ್ತಿಯುತ ಮಾತುಗಳಿಗೆ ಸಿಖ್ ಸಮುದಾಯ ಕೃತಜ್ಞತೆ ತೋರುತ್ತದೆ" ಎಂದಿದ್ದಾರೆ.
Advertisement