ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿ ಹೋರಾಟಕ್ಕೆ ಟೆಕ್ ಮೊರೆ ಹೋದ ಅಮೆರಿಕ
ವಾಷಿಂಗ್ಟನ್: ಭಯೋತ್ಪಾದನೆ ನಿಗ್ರಹಕ್ಕಾಗಿ ಅಮೆರಿಕದ ಫೆಡರಲ್ ಸರ್ಕಾರ ಹೈ-ಟೆಕ್ ಕಂಪನಿಗಳೊಂದಿಗೆ ಕೆಲಸ ಮಾಡುವುದಾಗಿ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಭಯೋತ್ಪಾದನೆ ನಿಗ್ರಹವನ್ನು ಮಟ್ಟಷ್ಟು ಪರಿಣಾಮಕಾರಿಯನ್ನಾಗಿ ಮಾಡಲು ಅಮೆರಿಕ ಸರ್ಕಾರ ಟೆಕ್ ಕಂಪನಿಗಳ ನೆರವು ಪಡೆಯಲು ಅಮೆರಿಕ ನಿರ್ಧರಿಸಿದ್ದು, ಶಂಕಿತ ಉಗ್ರರು ಹಾಗೂ ಭಯೋತ್ಪಾದನೆಯ ಜಾಡನ್ನು ಹಿಡಿಯಲು ಈ ಕ್ರಮ ಅನುಕೂಲಕರವಾಗಲಿದೆ ಎಂದು ಒಬಾಮ ಅಭಿಪ್ರಾಯಪಟ್ಟಿದಾರೆ.
ಇತ್ತೀಚೆಗೆ ಕ್ಯಾಲಿಫೋರ್ನಿಯಾ ಹಾಗೂ ಸ್ಯಾನ್ ಬರ್ನಾರ್ಡಿನೊದಲ್ಲಿ ನಡೆದ ಉಗ್ರರ ದಾಳಿ ಪ್ರಕರಣದ ನಂತರ ಅಮೆರಿಕ ಈ ಕ್ರಮಕ್ಕೆ ಮುಂದಾಗಿದ್ದು, ಅಮೆರಿಕದಲ್ಲಿದ್ದುಕೊಂಡೇ ದಾಳಿ ಮಾಡುವವರ ಬಗ್ಗೆ ಮುನ್ನೆಚರಿಕೆ ವಹಿಸಲು ಅಮೆರಿಕ ಸರ್ಕಾರ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿದ್ದುಕೊಂಡೇ ಇಸ್ಲಾಮಿಕ್ ಸ್ಟೇಟ್ ನಂತಹ ಭಯೋತ್ಪಾದಕ ಸಂಘಟನೆಗಳಿಂದ ಪ್ರೇರಣೆ ಪಡೆಯುವವರ ಜಾಡು ಹಿಡಿಯಲು ಅಮೆರಿಕ ಟೆಕ್ ಕಂಪನಿಗಳ ಸಹಾಯದ ಮೊರೆ ಹೋಗಿದೆ. ಕ್ಯಾಲಿಫೋರ್ನಿಯಾದಂತಹ ದಾಳಿಗಳನ್ನು ತಡೆಗಟ್ಟುವುದು ಕಠಿಣ ಸವಾಲಿನ ಕೆಲಸ ಎಂದು ಹೇಳಿರುವ ಬರಾಕ್ ಒಬಾಮ, ಒಂಟಿ ಉಗ್ರ (ಲೋನ್ ಉಲ್ಫ್) ದಾಳಿ ನಡೆಸುವುದನ್ನು ಪತ್ತೆ ಮಾಡುವುದು ಸುಲಭದ ಮಾತಲ್ಲ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ