ತಾಲಿಬಾನ್ ದಾಳಿಗೆ 6 ನ್ಯಾಟೋ ಯೋಧರು ಬಲಿ

ಆಫ್ಘಾನಿಸ್ತಾನದ ಬಗ್ರಮ್ ವಾಯುನೆಲೆ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ತನ್ನ ಆರು ಮಂದಿ ಸೈನಿಕರು ಮೃತಪಟ್ಟಿದ್ದಾರೆ ಎಂದು ನ್ಯಾಟೋ ಹೇಳಿದೆ...
ನ್ಯಾಟೋ ಯೋಧರು
ನ್ಯಾಟೋ ಯೋಧರು

ಕಂದಾಹಾರ್: ಆಫ್ಘಾನಿಸ್ತಾನದ ಬಗ್ರಮ್ ವಾಯುನೆಲೆ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ತನ್ನ ಆರು ಮಂದಿ ಸೈನಿಕರು ಮೃತಪಟ್ಟಿದ್ದಾರೆ ಎಂದು ನ್ಯಾಟೋ ಹೇಳಿದೆ.

ಆಫ್ಘನ್ ರಾಜಧಾನಿ ಕಾಬೂಲ್ ನ ನ್ಯಾಟೋ ನೆಲೆಯ ಸಾರ್ವಜನಿಕ ವ್ಯವಹಾರ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ವಿಲಿಯಂ ಶಾಫನರ್, ಉಗ್ರರ ಆತ್ಮಾಹುತಿ ದಾಳಿಯಲ್ಲಿ ಆರು ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ, ನ್ಯಾಟೋದ ಮೂರು ವಿದೇಶಿ ಪಡೆಗಳ ಬಣಗಳು ಕೂಡ ಗಾಯಗೊಂಡಿದ್ದಾರೆ ಎಂದು ಸೋಮವಾರ ತಿಳಿಸಿದ್ದಾರೆ.

ಆಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನಾ ನೆಲೆಗಳಲ್ಲೇ ದೊಡ್ಡದಾದ ಈ ನೆಲೆಯ ಮೇಲೆ ಸ್ಥಳೀಯ ಕಾಲಮಾನ ಮಧ್ಯಾಹ್ನ 1.30ರ ಸುಮಾರಿಗೆ ಭಾರೀ ದಾಳಿ ನಡೆದಿದೆ ಎನ್ನಲಾಗಿದ್ದು, ತಾಲಿಬಾನ್ ಉಗ್ರ ಸಂಘಟನೆ ದಾಳಿಯನ್ನು ತಾನೇ ನಡೆಸಿರುವುದಾಗಿ ಎಪಿ ಸುದ್ದಿಸಂಸ್ಧೆಗೆ ಕಳಿಸಿರುವ ಇ-ಮೇಲ್ ನಲ್ಲಿ ದಾಳಿಯ ಹೊಣೆ ಹೊತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com