ಲಿಬಿಯಾ ಸರ್ಕಾರಕ್ಕೆ ಸೆಡ್ಡು: ತನ್ನದೇ ಪೊಲೀಸ್ ಫೋರ್ಸ್ ರಚಿಸಿಕೊಂಡ ಇಸಿಸ್

ಲಿಬಿಯಾದಲ್ಲಿ ತನ್ನ ಪಾರುಪತ್ಯ ಮುಂದುವರೆಸಿರುವ ಭಯೋತ್ಪಾದಕ ಸಂಘಟನೆ ಇಸಿಸ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನದೇ ಸರ್ಕಾರ ರಚನೆಯತ್ತ ಮುಂದಾಗಿದೆ...
ಸಿರ್ತೇ ನಗರದಲ್ಲಿ ಇಸಿಸ್ ಪೊಲೀಸ್ ಫೋರ್ಸ್ (ಸಂಗ್ರಹ ಚಿತ್ರ)
ಸಿರ್ತೇ ನಗರದಲ್ಲಿ ಇಸಿಸ್ ಪೊಲೀಸ್ ಫೋರ್ಸ್ (ಸಂಗ್ರಹ ಚಿತ್ರ)

ಟ್ರಿಪೋಲಿ: ಲಿಬಿಯಾದಲ್ಲಿ ತನ್ನ ಪಾರುಪತ್ಯ ಮುಂದುವರೆಸಿರುವ ಭಯೋತ್ಪಾದಕ ಸಂಘಟನೆ ಇಸಿಸ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನದೇ ಸರ್ಕಾರ ರಚನೆಯತ್ತ ಮುಂದಾಗಿದೆ.

ಈ ಪೈಕಿ ತನ್ನ ಹಿಡಿತದಲ್ಲಿರುವ ಲಿಬಿಯಾದ ಸಿರ್ತೇ ನಗದರಲ್ಲಿ ಇಸಿಸ್ ತನ್ನದೇ ಆದ ಪೊಲೀಸ್ ಫೋರ್ಸ್ ರಚನೆ ಮಾಡಿದೆ. ಈ ಪೊಲೀಸ್ ಫೋರ್ಸ್ ಈಗಾಗಲೇ ತನ್ನ ಕಾರ್ಯಾಚರಣೆ ಆರಂಭಿಸಿದ್ದು, ಸಿರ್ತೇ ನಗರದಲ್ಲಿ ಗಸ್ತು  ತಿರುಗುತ್ತಿದೆ. ಪೊಲೀಸ್ ಫೋರ್ಸ್ ರಚನೆ ಮೂಲಕ ಇಸಿಸ್ ನಿಜಕ್ಕೂ ತಾನು ಇಸ್ಲಾಂ ರಾಷ್ಟ್ರ ಕಟ್ಟುವ ಕಾರ್ಯಕ್ಕೆ ಮುಂದಾಗಿದ್ದೇನೆ ಮತ್ತು ತನ್ನಿಂದ ಮಾತ್ರ ದೇಶವನ್ನು ಸ್ಥಿರಗೊಳಿಸಲು ಸಾಧ್ಯ ಎಂಬುದನ್ನು ಬಿಂಬಿಸಲು ಹೊರಟಂತಿದೆ.

ಇನ್ನು ಈ ಬಗ್ಗೆ ಹೊಸ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವ ಇಸಿಸ್, ಸಿರ್ತೇ ನಗರದಲ್ಲಿ ತನ್ನ ನೂತನ ಪೊಲೀಸ್ ಫೋರ್ಸ್ ಗಸ್ತು ತಿರುಗುವ ಮೂಲಕ ದೇಶವನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಲಿಬಿಯಾ ಮಾಜಿ ಅಧ್ಯಕ್ಷ ಮುಅಮ್ಮರ್ ಗಡಾಫಿ ಹತ್ಯೆ ಬಳಿಕ ಲಿಬಿಯಾದಲ್ಲಿ ಅಶಾಂತಿ ನೆಲೆಗೊಂಡಿದ್ದು, ಇಸಿಸ್ ಉಗ್ರರು ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ. ಇನ್ನು ಸಿರ್ತೇ ನಗರ ಕಳೆದ ಜೂನ್ ತಿಂಗಳಿನಿಂದಲೂ ಇಸಿಸ್ ಉಗ್ರರ ವಶದಲ್ಲಿದ್ದು, ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಉಗ್ರರು ಸಿರ್ತೇ ನಗರದಲ್ಲಿ ನೂತನ ಪೊಲೀಸ್ ವ್ಯವಸ್ಥೆಯನ್ನೇ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com