ಬಿಲ್ ಕ್ಲಿಂಟನ್ ಹುಟ್ಟಿದ ಮನೆಗೇ ಕಿಚ್ಚಿಟ್ಟರು!

ಕ್ರಿಸ್‍ಮಸ್ ಹಬ್ಬದ ಸಂಭ್ರಮದ ವೇಳೆಯಲ್ಲಿ ಅಮೆರಿಕದ ಅರ್ಕಾನ್ಸಾಸ್ ನಲ್ಲಿರುವ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ರ ಹುಟ್ಟಿದ ಮನೆಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಷಿಕಾಗೋ/ಮೆಲ್ಬರ್ನ್: ಕ್ರಿಸ್‍ಮಸ್ ಹಬ್ಬದ ಸಂಭ್ರಮದ ವೇಳೆಯಲ್ಲಿ ಅಮೆರಿಕದ ಅರ್ಕಾನ್ಸಾಸ್ ನಲ್ಲಿರುವ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ರ ಹುಟ್ಟಿದ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. 
ಶುಕ್ರವಾರ ಬೆಳಗ್ಗಿನ ಜಾವ ಬೈಕ್‍ನಲ್ಲಿ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳು ಮನೆಗೆ ಬೆಂಕಿ ಹೊತ್ತಿ ಉರಿಯುತ್ತಿದ್ದುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರಂಭಿಕ ತನಿಖೆಯ ಪ್ರಕಾರ ಈ ಘಟನೆ ಉದ್ದೇಶ ಪೂರ್ವಕವೇ ಆಗಿದೆ. 
ಈ ಬಗ್ಗೆ ಸಾಕ್ಷ್ಯಗಳಿವೆ. ತನಿಖೆ ನಡೆಯುತ್ತಿದೆ ಎಂದು ಅರ್ಕಾನ್ಸಾಸ್‍ನ ನೈಋತ್ಯ ಭಾಗದ ಪೊಲೀಸ್ ವಿಭಾಗದ ಮುಖ್ಯಸ್ಥ ಜೆ.ಆರ್.ವಿಲ್ಸನ್ ತಿಳಿಸಿದ್ದಾರೆ. ಮನೆಯ ಹೊರಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಎಂಟು ಅಡಿ ಎತ್ತರಕ್ಕೆ ಅದು ವ್ಯಾಪಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಗಾಳಿಗೆ 14 ಸಾವು: ಮತ್ತೊಂದೆಡೆ ಕ್ರಿಸ್ ಮಸ್ ಹಬ್ಬದ ಬಳಿಕ ನಗರವನ್ನು ಶುಚಿಗೊಳಿಸುತ್ತಿರುವ ವೇಳೆ ಬೀಸಿದ ಗಾಳಿ ಹಾಗೂ ಮಳೆಯಿಂದ 14 ಮಂದಿ ಅಸುನೀಗಿದ್ದಾರೆ. 
ಅಲಬಾಮಾದಿಂದ ಇಲಿನಾಯ್ಸ್ ವರೆಗೆ ಈ ಗಾಳಿ ಬೀಸಿದೆ. ಒಟ್ಟು ಆರು ಪ್ರಾಂತ್ಯಗಳಲ್ಲಿ ಗಾಳಿ ಬೀಸಿದೆ. ಹೀಗಾಗಿ ಈ ದುರಂತ ಸಂಭವಿಸಿದೆ. ಇದರಿಂದಾಗಿ ಪ್ರವಾಹ ಸದೃಶ ವಾತಾವರಣ ನಿರ್ಮಾಣವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
100 ಮನೆ ನಾಶ ಮತ್ತೊಂದೆಡೆ ದಕ್ಷಿಣ ಆಸ್ಟ್ರೇಲಿಯಾದಲ್ಲಿ ಕ್ರಿಸ್‍ಮಸ್ ಹಬ್ಬದ ಸಂಭ್ರಮದಲ್ಲಿರುವಾಗಲೇ ಕಾಡ್ಗಿಚ್ಚು ಉಂಟಾಗಿ, 100 ಮನೆಗಳು ಆಹುತಿಯಾಗಿವೆ. ಅದರಿಂದ ಉಂಟಾಗಬಹುದಾದ ಹಾನಿ ಊಹಿಸಲೂ ಅಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com