ಮೈದುಗುರಿ: ನೈಜೀರಿಯಾದ ಮೈದುಗಿರಿ ನಗರದ ಮೇಲೆ ಬೋಕೋ ಹರಾಮ್ ಇಸ್ಲಾಮಿಕ್ ಉಗ್ರರು ಸೋಮವಾರ ಗ್ರೆನೇಡ್ ಹಾಗೂ ಆತ್ಮಾಹುತಿ ದಾಳಿ ನಡೆಸಿದ್ದಾರೆ.
ಪರಿಣಾಮ 80 ಮಂದಿ ಮೃತಪಟ್ಟು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ನಡೆದ ದಾಳಿಗೆ 30 ಮಂದಿ, ಸೋಮವಾರ ಬೆಳಗ್ಗೆ ಮಸೀದಿಯಲ್ಲಿ ನಡೆದ ಮತ್ತೊಂದು ದಾಳಿಗೆ 20 ಮಂದಿ ಬಲಿಯಾಗಿದ್ದಾರೆ.
ಉಗ್ರರ ಪೈಕಿ ಮಹಿಳಾ ಆತ್ಮಾಹುತಿ ಬಾಂಬರ್‍ಗಳು ಕೂಡ ಇದ್ದರು. ಬೋಕೋ ಹರಾಂ ಅನ್ನು ತಾಂತ್ರಿಕವಾಗಿ ಸೋಲಿಸಿದ್ದೇವೆ ಎಂದು ಕಳೆದ ವಾರ ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ ಅವರು ಘೋಷಿಸಿದ್ದರು. ಇದಕ್ಕೆ ಪ್ರತೀಕಾರವಾಗಿಯೇ ಈ ದಾಳಿ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.