ಫ್ಯಾಷನ್‌ಶೋನಲ್ಲಿ 3000 ಮಾಡೆಲ್‌ಗಳ ಬಿಗ್ ಕ್ಯಾಟ್‌ವಾಕ್

ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿ ನಡೆದ ಈ ಫ್ಯಾಷನ್ ಶೋ ಹೆಸರು ದ ವೆರಿ ಬಿಗ್ ಕ್ಯಾಟ್‌ವಾಕ್. ಜಗತ್ತಿನಲ್ಲೇ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಮಾಡೆಲ್....
ಫ್ಯಾಷನ್ ಶೋ
ಫ್ಯಾಷನ್ ಶೋ

ಎಲ್ಲಿ ನೋಡಿದರೂ ಅಲ್ಲೆಲ್ಲಾ ಮಾಡೆಲ್‌ಗಳೇ ಕಣ್ಣಿಗೆ ಬೀಳುತ್ತಾರೆ. ಇಲ್ಲಿ ಭಾಗವಹಿಸಿದವರಲ್ಲಿ ಯುವ ಮಾಡೆಲ್‌ಗಳು ಮಾತ್ರ ಅಲ್ಲ, ಮಕ್ಕಳು ಮತ್ತು ಹಾಲಿವುಡ್ ನಟೀಮಣಿಯರೂ ಇದ್ದರು. ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿ ನಡೆದ ಈ ಫ್ಯಾಷನ್ ಶೋ ಹೆಸರು ದ ವೆರಿ ಬಿಗ್ ಕ್ಯಾಟ್‌ವಾಕ್. ಜಗತ್ತಿನಲ್ಲೇ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಮಾಡೆಲ್ ಗಳು ಭಾಗವಹಿಸಿದ ಕ್ಯಾಟ್‌ವಾಕ್ ಇದಾಗಿದ್ದು, ಇದೀಗ ಗಿನ್ನಿಸ್ ದಾಖಲೆಗೆ ಸೇರಿದೆ.

ಲಿವರ್‌ಪೂಲ್‌ನ ನದೀತಟದಲ್ಲಿ ನಡೆದ ಈ ಫ್ಯಾಷನ್ ಶೋನಲ್ಲಿ 3651 ಮಾಡೆಲ್‌ಗಳು ಭಾಗವಹಿಸಿದ್ದರು. 2013ರಲ್ಲಿ ಮೆಕ್ಸಿಕೋ ಸಿಟಿಯಲ್ಲಿ ನಡೆದ ಫ್ಯಾಷನ್ ಶೋನಲ್ಲಿ 3083 ಜನರು ಭಾಗವಹಿಸಿ ದಾಖಲೆ ಸೃಷ್ಟಿಸಿದ್ದರು. ಆ ದಾಖಲೆಯನ್ನು ಲಿವರ್‌ಪೂಲ್‌ನಲ್ಲಿ ನಡೆದ ಬಿಗ್ ಕ್ಯಾಟ್‌ವಾಕ್ ಮುರಿದಿದೆ.

ವಿಂಟೇಜ್ ಫ್ಯಾಷನ್ ಜತೆ ಪುಟ್ಟ ಮಕ್ಕಳ ಜತೆ ಅಮ್ಮಂದಿರೂ ಕ್ಯಾಟ್‌ವಾಕ್  ಮಾಡಿದ್ದು ವಿಶೇಷ ಆಕರ್ಷಣೆಯಾಗಿತ್ತು. ಲಿವರ್ ಪೂಲ್‌ನ ಎಲ್ಲ ರೀತಿಯ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಸ್ತುತ ಶೋನಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದ ವೆಯಿಲ್ಸ್ ಹೆಮ್ಮಿಂಗ್ವೋ ಅಲ್ಲಿನ ಬೋಳುತಲೆಯವರ ಸಂಘದವವರೊಂದಿಗೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದರು.

ರ್ಯಾಂಪ್ ವಾಕ್ ನಡೆದ ನಂತರ ಸಿಡಿಮದ್ದು ಪ್ರದರ್ಶನ ಮತ್ತು ಡಿಜೆ ಪಾರ್ಟಿ ಇತ್ತು. ಮಾತ್ರವಲ್ಲ ಅಲ್ಲಿ ಲಂಗರು ಹಾಕಿದ್ದ ಆರ್‌ಎಂಎಸ್ ಕ್ವೀನ್ ಮೇರಿ 2 ಎಂಬ ಹಡಗು ಅಲ್ಲಿಂದ ಪ್ರಯಾಣ ಬೆಳೆಸಿತ್ತು. ಈ ಹಡಗಿಗೆ ಗುಡ್‌ಬೈ ಹೇಳುವುದಕ್ಕಾಗಿಯೇ ಈ ಫ್ಯಾಷನ್ ಶೋ ಆಯೋಜಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com