ಹಿಂದು ವಿವಾಹ ಕಾಯ್ದೆಯನ್ನು ಚರ್ಚಿಸಲಿರುವ ಪಾಕಿಸ್ತಾನ ಸಂಸದೀಯ ಸಮಿತಿ

ಕೊನೆಗೂ ಪಾಕಿಸ್ತಾನಿ ಸಂಸದೀಯ ಸಮಿತಿ ಹಿಂದು ವಿವಾಹ ಕಾಯ್ದೆಯ ಚರ್ಚೆಯನ್ನು ಸೋಮವಾರ ಕೈಗೆತ್ತುಕೊಳ್ಳಲಿದೆ. ಹಿಂದು ವಿವಾಹ ಕಾಯ್ದೆ ೨೦೧೪ನ್ನು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕರಾಚಿ: ಕೊನೆಗೂ ಪಾಕಿಸ್ತಾನಿ ಸಂಸದೀಯ ಸಮಿತಿ ಹಿಂದು ವಿವಾಹ ಕಾಯ್ದೆಯ ಚರ್ಚೆಯನ್ನು ಸೋಮವಾರ ಕೈಗೆತ್ತುಕೊಳ್ಳಲಿದೆ. ಹಿಂದು ವಿವಾಹ ಕಾಯ್ದೆ ೨೦೧೪ನ್ನು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ರಾಷ್ಟ್ರೀಯ ಸಂಸದೀಯ ಸಮಿತಿ ಪರಿಶೀಲಿಸಲಿದೆ.

ಮಾರ್ಚ್ ನಲ್ಲಿ ಕಾನೂನು ಸಚಿವ ಪರ್ವೇಜ್ ರಶೀದ್ ಮುಂದಾಳತ್ವದ ಸಮಿತಿ ಈ ಕಾಯ್ದೆಯನ್ನು ಮಂಡಿಸಿತ್ತು . ಈಗ ಇದನ್ನು ಮುನ್ನಡೆಸುತ್ತಿರುವವರು ಚೌಧರಿ ಮುಹಮ್ಮದ್ ಬಶೀರ್ ವರ್ಕ್. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಮುಖಂಡ ರಮೇಶ್ ಲಾಲ್ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ಮುಖಂಡ ಡಾ.ದರ್ಶನ್ ಜಂಟಿಯಾಗಿ ಈ ಕಾಯ್ದೆಗೆ ಬೆಂಬಲ ವ್ಯಕ್ತಪಡಿಸಿದ್ದರು.

ಸದ್ಯಕ್ಕೆ ಪಾಕಿಸ್ತಾನದ ಹಿಂದುಗಳಿಗೆ ತಮ್ಮ ವಿವಾಹದ ಕಾನೂನಾತ್ಮಕ ದಾಖಲೆಗಳು ಕೂಡ ಲಭ್ಯವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com