ಸಲಿಂಗಿ ಪುರುಷನಿಂದ ವೀರ್ಯದಾನ; ಈತನಿಗೆ ಹುಟ್ಟಿದ್ದು 13 ತಿಂಗಳಲ್ಲಿ 10 ಮಕ್ಕಳು!

ಬ್ರಿಟನ್‌ನ ಸಲಿಂಗಿ ಪುರುಷನೊಬ್ಬ ವೀರ್ಯದಾನ ಮಾಡಿ, 13 ತಿಂಗಳಲ್ಲಿ 10 ಮಕ್ಕಳಿಗೆ ಅಪ್ಪನಾಗಿದ್ದಾನೆ...
ಕೆಂಜಿ ಕಿಲ್‌ಪ್ಯಾಟ್ರಿಕ್
ಕೆಂಜಿ ಕಿಲ್‌ಪ್ಯಾಟ್ರಿಕ್

ಲಂಡನ್:  ಬ್ರಿಟನ್‌ನ ಸಲಿಂಗಿ ಪುರುಷನೊಬ್ಬ ವೀರ್ಯದಾನ ಮಾಡಿ, 13 ತಿಂಗಳಲ್ಲಿ 10 ಮಕ್ಕಳಿಗೆ ಅಪ್ಪನಾಗಿದ್ದಾನೆ.

ಬಿರ್ಮಿಂಗ್‌ಹ್ಯಾಂನ ಕೆಂಜಿ ಕಿಲ್‌ಪ್ಯಾಟ್ರಿಕ್ ಎಂಬ ಸಲಿಂಗಿಗೆ ಇತ್ತೀಜೆಗೆ ಫೇಸ್‌ಬುಕ್ ಮೂಲಕ ಲೆಸ್ಬಿಯನ್ ದಂಪತಿಗಳನ್ನು ಪರಿಚಯವಾಗಿತ್ತು. ಅವರಿಗೆ ಮಗು ಬೇಕೆಂಬ ಮಹದಾಸೆಯಿದ್ದು, ಆ ದಂಪತಿಗಳಿಗೆ ಈತ ಉಚಿತವಾಗಿ ವೀರ್ಯದಾನ ಮಾಡಿ ಮಗುವೊಂದನ್ನು ಕರುಣಿಸಿದ್ದಾನೆ. 13 ತಿಂಗಳಿನಿಂದ ಈತ ವೀರ್ಯದಾನ ಮಾಡಿದ್ದು, ಇದು ಈತ ವೀರ್ಯದಾನ ಮಾಡಿದಲ್ಲಿ ಹುಟ್ಟಿದ 10ನೇ ಮಗುವಾಗಿದೆ.

26 ರ ಹರೆಯದ ಕೆಂಜಿ ಅಪರಿಚಿತ ಲೆಸ್ಬಿಯನ್ ದಂಪತಿಗಳಿಗೆ ಮಾತ್ರವೇ ವೀರ್ಯದಾನ ಮಾಡುತ್ತಿದ್ದಾನೆ. ಇನ್ನೊಬ್ಬರಿಗೆ ಸಹಾಯ ಮಾಡಬೇಕು, ಮಕ್ಕಳನ್ನು ಹೊಂದುವ ಅವರ ಆಸೆಯನ್ನು ಈಡೇರಿಸುವ ಸಲುವಾಗಿ ತಾನು ಲೆಸ್ಬಿಯನ್ ದಂಪತಿಗಳಿಗೆ ವೀರ್ಯದಾನ ಮಾಡುತ್ತಿದ್ದೇನೆ ಎಂದು ಕೆಂಜಿ ಹೇಳಿರುವುದನ್ನು ಡೈಲೀ ಮೇಲ್ ವರದಿ ಮಾಡಿದೆ.

ಸಂಸಾರದ ಖುಷಿಗೆ ಪುರುಷನ ಅಗತ್ಯವಿದೆ ಎಂದು ನನಗೆ ಅನಿಸುವುದಿಲ್ಲ ಅಂತಾನೆ
ಕೆಂಜಿ. ಈತನಿಗೆ 5 ವರ್ಷದವನಿರುವಾಗ ಈತನ ಅಪ್ಪ ಸಂಸಾರ ತೊರೆದು ಹೋಗಿದ್ದನಂತೆ. ಅನಂತರ ಅಮ್ಮ ಒಬ್ಬಳೇ ಈತನನ್ನು ಬೆಳೆಸಿದ್ದು.

ನನ್ನ ಅಮ್ಮನೇ ನನಗೆ ಶೇವಿಂಗ್ ಮಾಡುವುದು ಹೇಗೆ ಎಂದು ಕಲಿಸಿದಳು, ಬಿಯರ್ ಕುಡಿಯುವುದು ಹೇಗೆಂದು ಕಲಿಸಿದಳು. ಅವಳೇ ನನ್ನ ಶಕ್ತಿ.ಲೆಸ್ಬಿಯನ್ ದಂಪತಿಗಳಿದ್ದರೆ ಅಲ್ಲಿ ಆ ಮಗುವಿಗೆ ಇಬ್ಬರು ಅಮ್ಮಂದಿರು ಇರುತ್ತಾರೆ. ಮಹಿಳೆಯರು ಉತ್ತಮ ಕೆಲಸಗಳನ್ನು ಮಾಡಬಲ್ಲರು. ಆ ತಾಕತ್ತು ಅವರಿಗೆ ಇದೆ ಅಂತಾನೆ ಕೆಂಜಿ.

ಕೊಲಂಬಿಯಾ, ಮೆಕ್ಸಿಕೋ ಮತ್ತು ಪೊಲ್ಯಾಂಡ್ ನಿಂದ ಸುಮಾರು 100ಕ್ಕೂ ಹೆಚ್ಚು ಮಹಿಳೆಯರು ವೀರ್ಯ ನೀಡುವಂತೆ ಈತನನ್ನು ಸಂಪರ್ಕಿಸಿದ್ದಾರಂತೆ. ಆದರೆ ಇದೀಗ 10 ಮಕ್ಕಳ ತಂದೆಯಾದ ನಂತರ ವೀರ್ಯದಾನ ಮಾಡುವುದನ್ನು ನಿಲ್ಲಿಸಲು ಕೆಂಜಿ ತೀರ್ಮಾನಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com