ಇದೇ ವೇಳೆ, ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನೋಡುವುದು ಒಳ್ಳೆಯ ಸಂಪ್ರದಾಯವಲ್ಲ. ಈ ರೀತಿಯ ಮನಸ್ಥಿತಿ ಬದಲಾಗಬೇಕಿದೆ. ಇಂಥ ಮನೋಭಾವದಿಂದ ದೇಶದ ಪ್ರಗತಿ ಅಸಾಧ್ಯ ಎಂದ ಅವರು, ಅವರನ್ನೂ ಸಮಾನರಂತೆ ಕಾಣುವಂತ ಬದಲಾವಣೆಗಾಗಿ ಮನವಿ ಮಾಡಿದ್ದಾರೆ. ಒಬಾಮ ಅವರು ಈ ಹಿಂದೆಯೇ ಕೀನ್ಯಾಗೆ ಭೇಟಿ ನೀಡಬೇಕಿತ್ತು. ಆದರೆ, ದೇಶದ ಅಧ್ಯಕ್ಷ ಉಹುರು ಕೀನ್ಯತ್ತಾ ಅವರು ಮಾನವ ಕಗ್ಗೊಲೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಭೇಟಿ ಸಾಧ್ಯವಾಗಿರಲಿಲ್ಲ. ಆದರೆ, ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯವು ನಂತರ ಸಾಕ್ಷ್ಯಗಳ ಕೊರತೆ ಹಿನ್ನೆಲೆಯಲ್ಲಿ ಕೀನ್ಯತ್ತಾ ಮೇಲಿನ ವಿಚಾರಣೆ ಕೈಬಿಟ್ಟಿತ್ತು.