ಕಲಾಂ ತೈಲವರ್ಣ ಚಿತ್ರದೊಂದಿಗೆ ಕಲಾವಿದ ಅಕ್ಬರ್ ಸಾಹೇಬ್
ಕಲಾಂ ತೈಲವರ್ಣ ಚಿತ್ರದೊಂದಿಗೆ ಕಲಾವಿದ ಅಕ್ಬರ್ ಸಾಹೇಬ್

ದುಬೈ ಕಲಾವಿದನ ಕುಂಚದಲ್ಲಿ ಅರಳಿದ ಕಲಾಂ ತೈಲವರ್ಣ ಚಿತ್ರ

ಡಾ.ಎಪಿಜೆ ಅಬ್ದುಲ್ ಕಲಾಂ ಅಂದರೆ ಈ ಕಲಾವಿದನಿಗೆ ಬಲು ಅಚ್ಚು ಮೆಚ್ಚು. ಕಲಾಂ ಇನ್ನಿಲ್ಲವೆಂದಾಗ ಈತ ರಚಿಸಿದ್ದು ಅವರ ತೈಲವರ್ಣ ಚಿತ್ರ...
Published on

ದುಬೈ: ಡಾ.ಎಪಿಜೆ ಅಬ್ದುಲ್ ಕಲಾಂ ಅಂದರೆ ಈ ಕಲಾವಿದನಿಗೆ ಬಲು ಅಚ್ಚು ಮೆಚ್ಚು. ಕಲಾಂ ಇನ್ನಿಲ್ಲವೆಂದಾಗ ಈತ ರಚಿಸಿದ್ದು ಅವರ ತೈಲವರ್ಣ ಚಿತ್ರ. ತನ್ನ ತೈಲವರ್ಣ ಚಿತ್ರದ ಮೂಲಕ ಕಲಾಂ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಕಲಾವಿದನ ಹೆಸರು ಅಕ್ಬರ್ ಸಾಹೇಬ್.
 
ಫ್ರೀಡಂ ಫೈಟರ್ಸ್ ಎಂಬ ಚಿತ್ರ ಸರಣಿಯಲ್ಲಿ ಅಕ್ಬರ್ ರಚಿಸಿದ ಮೊದಲನೇ ಚಿತ್ರಮಹಾತ್ಮಾ ಗಾಂಧಿಯ ಚಿತ್ರವಾಗಿದ್ದು. ನೀವು ತಂದುಕೊಟ್ಟ ಸ್ವಾತಂತ್ರ್ಯವನ್ನು ನಾವು ಕಾಪಾಡುತ್ತೇವೆ ಎಂದು ಇದಕ್ಕೆ ಶೀರ್ಷಿಕೆ ನೀಡಲಾಗಿತ್ದು, ಇದಾದ ನಂತರ ರಚಿಸಿದ ಚಿತ್ರವೇ ಅಬ್ದುಲ್  ಕಲಾಂ ಅವರದ್ದು. ಪೋಕ್ರಾನ್ ಪರಮಾಣು ಪರೀಕ್ಷೆಯ ಚಿತ್ರ ಮತ್ತು ಕಲಾಂ ಗಲ್ಲಕ್ಕೆ ಕೈಕೊಟ್ಟು ಕುಳಿತಿರುವ ಚಿತ್ರವನ್ನು ಅಕ್ಬರ್ ರಚಿಸಿದ್ದಾರೆ.

ಈ ಹಿಂದೆ 2004ರಲ್ಲಿ ದಿವಂಗತರಾದ ಶೇಖ್ ಜಯಾದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ  38 ವರ್ಷದ ಆಳ್ವಿಕೆಯನ್ನು ಬಿಂಬಿಸುವ 38 ಚಿತ್ರಗಳ ಪ್ರದರ್ಶನವನ್ನು ಅಕ್ಬರ್ ಹಮ್ಮಿಕೊಂಡಿದ್ದರು. ಇದು ಮಾತ್ರವಲ್ಲದೆ ಗುಜರಾತ್‌ನಲ್ಲಿ 12 ವರ್ಷಗಳ ಕಾಲದ ಮೋದಿ ಆಳ್ವಿಕೆ ಬಗ್ಗೆಯೂ 12 ಚಿತ್ರಗಳನ್ನು ರಚಿಸಿ ಗಮನ ಸೆಳೆದಿದ್ದರು.

ಉಡುಪಿ ಮೂಲದವರಾಗಿರುವ ಅಕ್ಬರ್ ಸಾಹೇಬ್ ದುಬೈನಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com