
ಲಂಡನ್: ಜಗತ್ಪ್ರಸಿದ್ಧ ಕೊಹಿ ನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸಬೇಕೆಂದು ಭಾರತ ಮೂಲದ ಬ್ರಿಟಿಷ್ ಸಂಸದ ಕೀತ್ ವಾಜ್ ಕರೆ ನೀಡಿದ್ದಾರೆ. ಭಾರತದ ಪ್ರಧಾನಿ ಬ್ರಿಟನ್ ಗೆ ಭೇಟಿ ನೀಡಲಿದ್ದು ಆ ಸಮಯದಲ್ಲಿ ವಜ್ರ ಹಿಂದಿರುಗಿಸ ಬೇಕೆಂದು ಹೇಳಿದ್ದಾರೆ. ಇತ್ತೀಚೆಗೆ ಸಂಸದ ಶಶಿ ತರೂರ್ ಆಕ್ಸ್ ಫರ್ಡ್ ಯೂನಿಯನ್‍ನಲ್ಲಿ ಮಾಡಿದ ಭಾಷಣದಲ್ಲಿ ``200 ವರ್ಷ ಭಾರತವನ್ನು ಆಳಿದ ಬ್ರಿಟಿಷರು ಅಂದು ಮಾಡಿದ ಹಾನಿಯನ್ನು ತುಂಬಿಕೊಡಬೇಕು'' ಎಂದಿದ್ದರು. ಆ ಮಾತುಗಳಿಗೆ ಸಹಮತ ವ್ಯಕ್ತ ಪಡಿಸಿರುವ ವಾಜ್, ತರೂರ್ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸ ಬೇಕು ಎಂದಿದ್ದಾರೆ.
ಹಣದ ಮೂಲಕ ನಷ್ಟ ಭರ್ತಿ ಮಾಡಿ ಕೊಡಲು ಸಾಧ್ಯವಿಲ್ಲವಾದರೂ, ಕೊಹಿನೂರ್ ವಜ್ರ ವಾಪಸ್ ನೀಡುವ ಮೂಲಕ ನಷ್ಟ ಭರಿಸಿಕೊಡದಿರಲು ಕಾರಣಗಳಿಲ್ಲ. ಈ ಮಾತನ್ನು ಹಲವು ವರ್ಷ ಗಳಿಂದ ಹೇಳುತ್ತಾ ಬಂದಿದ್ದೇನೆ'' ಎಂದಿರುವ ವಾಜ್, ಮೋದಿ ಮತ್ತು ಕ್ಯಾಮರೂನ್ ಭೇಟಿಯಾದಾಗ ಕೊಹಿನೂರ್ ವಜ್ರವನ್ನು ಭಾರತಕ್ಕೆಮರಳಿಸಿಗರೆ ಅದೊಂದು ಐತಿಹಾಸಿಕ ಕ್ಷಣವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.
Advertisement