97ರ ಇಳಿವಯಸ್ಸಲ್ಲಿ ಸಿಕ್ಕಿತು ಹೈಸ್ಕೂಲ್ ಡಿಪ್ಲೋಮಾ!

ಇಳಿ ವಯಸ್ಸಿಗೂ-ಹೈಸ್ಕೂಲ್‍ಗೂ ಎತ್ತಣಿಂದೆತ್ತ ಸಂಬಂಧ? ಬರೋಬ್ಬರಿ 97 ವರ್ಷದ ಅಜ್ಜಿಯೊಬ್ಬರು ಈಗ ಹೈಸ್ಕೂಲ್ ಡಿಪ್ಲೋಮಾ ಪಡೆದಿದ್ದಾರೆ. ಅದೂ ಹೈಸ್ಕೂಲ್ ನ ಸಂಪರ್ಕವನ್ನು ಬಿಟ್ಟ 79 ವರ್ಷಗಳ ಬಳಿಕ!...
97ರ ಇಳಿವಯಸ್ಸಲ್ಲಿ ಸಿಕ್ಕಿತು ಹೈಸ್ಕೂಲ್ ಡಿಪ್ಲೋಮಾ!
97ರ ಇಳಿವಯಸ್ಸಲ್ಲಿ ಸಿಕ್ಕಿತು ಹೈಸ್ಕೂಲ್ ಡಿಪ್ಲೋಮಾ!

ವಾಷಿಂಗ್ಟನ್: ಇಳಿ ವಯಸ್ಸಿಗೂ-ಹೈಸ್ಕೂಲ್‍ಗೂ ಎತ್ತಣಿಂದೆತ್ತ ಸಂಬಂಧ? ಬರೋಬ್ಬರಿ 97 ವರ್ಷದ ಅಜ್ಜಿಯೊಬ್ಬರು ಈಗ ಹೈಸ್ಕೂಲ್ ಡಿಪ್ಲೋಮಾ ಪಡೆದಿದ್ದಾರೆ. ಅದೂ ಹೈಸ್ಕೂಲ್ ನ ಸಂಪರ್ಕವನ್ನು ಬಿಟ್ಟ 79 ವರ್ಷಗಳ ಬಳಿಕ!

ಹೌದು. ಅಮೆರಿಕದ ಅಜ್ಜಿಯೊಬ್ಬರ ಕಥೆಯಿದು. ಹೈಸ್ಕೂಲ್ ಓದುತ್ತಿದ್ದಾಗ ಕ್ಯಾನ್ಸರ್ ಪೀಡಿತ ಅಮ್ಮನ ಸೇವೆಗೆಂದು, ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿದ್ದರು ಮಾರ್ಗರೇಟ್ ಥೋಮï ಬೆಕೆಮಾ. ಇದಾದ ನಂತರ ಅವರು ಶಾಲೆಯ ಮುಖವನ್ನು ನೋಡಿಯೋ ಇಲ್ಲ. ಆದರೆ, ಹೈಸ್ಕೂಲ್ ಮುಗಿಸಲಿಲ್ಲವಲ್ಲಾ ಎಂಬ ಕೊರಗು ಮಾತ್ರ ಕಾಡುತ್ತಲೇ ಇತ್ತು.

ಇತ್ತೀಚೆಗೆ, ಅವರ ಕುಟುಂಬ ಸದಸ್ಯರು ಈ ಬಗ್ಗೆ ಶಾಲೆಯ ಮುಖ್ಯಸ್ಥರಲ್ಲಿ ಮಾತನಾಡಿದ್ದರಂತೆ. ಪರಿಣಾಮ, ಈಗ ಶಾಲೆಯು ಮಾರ್ಗರೇಟ್‍ಗೆ ಹೈಸ್ಕೂಲ್ ಡಿಪ್ಲೋಮಾದ ಗೌರವ ನೀಡಿದೆ. ವಿಷಯ ತಿಳಿದಾಗ ಬೆಚ್ಚಿಬಿದ್ದ ಮಾರ್ಗರೇಟ್, ನಾನು ನಿಮಗೆ ಹೇಗೆ ಧನ್ಯವಾದ ಹೇಳಬೇಕೆಂದೇ ತಿಳಿಯುತ್ತಿಲ್ಲ ಎನ್ನುತ್ತಾ ಕಣ್ಣೀರು ಹಾಕಿದರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com