
ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ನಡುವಿನ ಅಸ್ಥಿರ ದ್ವಿಪಕ್ಷೀಯ ಸಂಬಂಧ ಮುಗ್ಧ ನಾಗರಿಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪಾಕಿಸ್ತಾನ ಪತ್ರಿಕೆಯೊಂದು ಸಂಪಾದಕೀಯ ಬರೆದಿದಿದೆ.
ಎಲ್ಒಸಿಯಲ್ಲಿರುವ ವಾತಾವರಣದ ಬಗ್ಗೆ ದಿ ನೇಷನ್ ಪತ್ರಿಕೆ ಸಂಪಾದಕೀಯ ಪ್ರಕಟಿಸಿದ್ದು, 2003 ರ ಭಾರತ- ಪಾಕಿಸ್ತಾನ ಒಪ್ಪಂದವನ್ನು ಜಾರಿ ಮಾಡುವ ಬಗ್ಗೆ ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಹೇಳಿಕೆಯನ್ನು ಉಲ್ಲೇಖಿಸಲಾಗಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಸೂಕ್ತ ಕಾಲ ಎಂದು ಹೇಳಿದೆ.
ಭಯೋತ್ಪಾದನೆ ಬೆಳವಣಿಗೆಗೆ ಸಂಬಂಧಿಸಿದಂತೆ ಭಾರತ ಪಾಕಿಸ್ತಾನವನ್ನು ನಿರಂತರವಾಗಿ ದೂಷಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆ ಬಗ್ಗೆ ಸಣ್ಣ ಘಟನೆಗಳನ್ನು ಉದಾಹರಿಸಿ ಪಾಕಿಸ್ತಾನದ ವಿರುದ್ಧ ಆರೋಪ ಮಾಡಿದ್ದರು. ಅಲ್ಲದೇ ಭಯೋತ್ಪಾದನೆಗೆ ನೆಲೆ ನೀಡುವ ರಾಷ್ಟ್ರಗಳ ವಿರುದ್ಧ ಮಾನವೀಯ ಮೌಲ್ಯಗಳಿಗೆ ಮಹತ್ವ ನಿಡುವ ರಾಷ್ಟ್ರಗಳು ಒಂದಾಗಬೇಕೆಂದು ಕರೆ ನೀಡಿದ್ದರು, ಇಂತಹ ದ್ವೇಷದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.
ಉಭಯ ದೇಶಗಳ ಅಸ್ಥಿರ ದ್ವಿಪಕ್ಷೀಯ ಸಂಬಂಧದಿಂದಾಗಿ ಮುಗ್ಧ ನಾಗರಿಕರು ಬಳಲುತ್ತಿರುವುದನ್ನು ಯಾವ ಅಂತಾರಾಷ್ಟ್ರೀಯ ಮಾನವೀಯ ಸಂಸ್ಥೆಗಳೂ ಗಮನಿಸಿಲ್ಲ ಎಂದು ಪಾಕ್ ಪತ್ರಿಕೆ ಆರೋಪಿಸಿದೆ.
Advertisement