ಮಾ್ಯನ್ಮಾರ್‍ನಲ್ಲಿ ಸೂಕಿ ಪಕ್ಷಕ್ಕೆ ಮತ

ದಶಕಗಳ ಕಾಲ ಮಿಲಿಟರಿ ಆಡಳಿತದಲ್ಲಿ ನಲುಗಿರುವ ಮ್ಯಾನ್ಮಾರ್ ನ ಜನತೆ ಬದಲಾವಣೆ ಬಯಸಿದ್ದಾರೆ. ಭಾನುವಾರ ಇಲ್ಲಿ ನಡೆದ ಸಂಸತ್ ಚುನಾವಣೆಗಳ ಮತಗಳ ಎಣಿಕೆ ಸೋಮವಾರ ನಡೆದಿದ್ದು, ಆಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಆಫ್...
ಎನ್‍ಎಲ್‍ಡಿ ಪ್ರಧಾನ ಕಚೇರಿ ಬಳಿ ಜನರನ್ನುದ್ದೇಶಿಸಿ ಮಾತನಾಡುತ್ತಿರುವ ನಾಯಕಿ ಸೂಕಿ .
ಎನ್‍ಎಲ್‍ಡಿ ಪ್ರಧಾನ ಕಚೇರಿ ಬಳಿ ಜನರನ್ನುದ್ದೇಶಿಸಿ ಮಾತನಾಡುತ್ತಿರುವ ನಾಯಕಿ ಸೂಕಿ .
Updated on

ಯಾಂಗೂನ್: ದಶಕಗಳ ಕಾಲ ಮಿಲಿಟರಿ ಆಡಳಿತದಲ್ಲಿ ನಲುಗಿರುವ ಮ್ಯಾನ್ಮಾರ್ ನ ಜನತೆ ಬದಲಾವಣೆ ಬಯಸಿದ್ದಾರೆ. ಭಾನುವಾರ ಇಲ್ಲಿ ನಡೆದ ಸಂಸತ್ ಚುನಾವಣೆಗಳ ಮತಗಳ ಎಣಿಕೆ ಸೋಮವಾರ ನಡೆದಿದ್ದು, ಆಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಆಫ್ ಡೆಮಾಕ್ರಸಿ ಪಕ್ಷ ಬಹುಮತ ದಾಖಲಸಿದೆ. ಸೋಮವಾರ ತಡರಾತ್ರಿಯವರೆಗೆ ಮತಎಣಿಕೆ ನಡೆದಿದ್ದು, ಮೊದಲ ಸುತ್ತಿನ ಎಣಿಕೆಯಲ್ಲಿ 37ರಲ್ಲಿ 37 ಸೀಟುಗಳು ಎನ್ ಎಲ್ ಡಿ ಪಾಲಾಗಿವೆ.

ದಶಕಗಳ ಕಾಲ ಮಿಲಿಟರಿ ಆಡಳಿತದಲ್ಲಿ ನಲುಗಿರುವ ಮಾ್ಯನ್ಮಾರ್‍ನ ಜನತೆ ಬದಲಾವಣೆ ಬಯಸಿದ್ದಾರೆ. ಭಾನುವಾರ ಇಲ್ಲಿ ನಡೆದ ಸಂಸತ್ ಚುನಾವಣೆಗಳ ಮತಗಳ ಎಣಿಕೆ ಸೋಮವಾರ ನಡೆದಿದ್ದು, ಆಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಆಫ್ ಡೆಮಾಕ್ರಸಿ ಪಕ್ಷ ಬಹುಮತ ದಾಖಲಿಸಿದೆ. ಸೋಮವಾರ ತಡರಾತ್ರಿಯವರೆಗೆ ಮತಎಣಿಕೆ ನಡೆದಿದ್ದು, ಮೊದಲ ಸುತ್ತಿನ ಎಣಿಕೆಯಲ್ಲಿ 36ರಲ್ಲಿ 35 ಸೀಟುಗಳು ಎನ್‍ಎಲ್‍ಡಿ ಪಾಲಾಗಿವೆ. ಎನ್‍ಎಲ್‍ಡಿ ಅಧಿಕಾರಕ್ಕೇರಲು ಇಲ್ಲಿ ಅದು ಶೇ.67 ಸ್ಥಾನಗಳನ್ನು ಗಳಿಸುವುದು ಅಗತ್ಯ. ಇದುವರೆಗಿನ ಎಣಿಕೆಯಂತೆ ದೇಶಾದ್ಯಂತ ನಮ್ಮ ಪಕ್ಷ ಶೇ.70ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಎಂದು ಪಕ್ಷದ ವಕ್ತಾರ ವಿನ್ ತೆಯಿನ್ ಹೇಳಿದ್ದಾರೆ.

ಎನ್‍ಎಲ್‍ಡಿ ನಾಯಕಿ ಸೂಕಿ ವಿಜಯದ ಸಂಭ್ರಮಾಚರಣೆಯಿಂದ ಅಂತರ ಕಾಯ್ದು ಕೊಂಡಿದ್ದಾರೆ. ವಿಜಯ ನಿಶ್ಚಿತವಾಗಿದ್ದರೂ, ನಮ್ಮನ್ನು ಅಬಿsನಂದಿಸಿಕೊಳ್ಳಲು ಇದು ಸಕಾಲ ವಲ್ಲ. ನಾವು ಹೇಳದೆ ಇದ್ದರೂ ಜನತೆ ಫಲಿತಾಂಶವನ್ನು ಅರ್ಥಮಾಡಿಕೊಳ್ಳಬಲ್ಲರು ಎಂದು ಸೂಕಿ ಹೇಳಿದ್ದಾರೆ. ಜಾಗತಿಕ ನಾಯಕಿ ಎನಿಸಿಕೊಂಡಿದ್ದರೂ ಇಲ್ಲಿನ ಸೇನಾ ಲಿಖಿತ ಸಂವಿಧಾನದ ಪ್ರಕಾರ ಸೂಕಿ ಅಧ್ಯಕ್ಷ ಪದವಿಯಿಂದ ಬಾಹಿರರಾಗಿ ದ್ದಾರೆ.

ಮತ ಎಣಿಕೆಯ ಸ್ಥೂಲ ಫಲಿತಾಂಶವನ್ನು 48 ಗಂಟೆಗಳಲ್ಲಿ ಹಾಗೂ ಸಮಗ್ರ ಫಲಿತಾಂಶವನ್ನು 10 ದಿನಗಳಲ್ಲಿ ನೀಡುವುದಾಗಿ ಅ„ಕಾರಿಗಳು ಹೇಳಿದ್ದಾರೆ. ಪ್ರಸ್ತುತ ಅಧಿಕಾರದಲ್ಲಿರುವ, ಮಿಲಿಟರಿ ಬೆಂಬಲ ಹೊಂದಿರುವ ಒಕ್ಕೂಟ ಏಕತಾ ಮತ್ತು ಅಭಿವೃದ್ಧಿ ಪಕ್ಷ (ಯುಎಸ್‍ಡಿಪಿ) ಮತ್ತದರ ಮಿತ್ರಪಕ್ಷಗಳ ಹಲವು ಹುದ್ದರಿಗಳು ಇದುವರೆಗಿನ ಎಣಿಕೆಯಂತೆ ಸೋಲು ಕಂಡಿದ್ದಾರೆ. ಆದರೆ ಸೇನಾ ಲಿಖಿತ ಸಂವಿಧಾನದ ಪ್ರಕಾರ, ಶೇ.25ರಷ್ಟು ಸ್ಥಾನಗಳನ್ನು ಯುಎಸ್‍ಡಿಪಿ ಗಳಿಸಿದರೆ ಅದು ಅಧಿಕಾರದ ಮೇಲೆ ಮುಂದೆಯೂ ಪ್ರಭಾವ ಹೊಂದಿರಲಿದೆ. ಹೀಗಾಗಿ ಆಂಗ್ ಸಾನ್ ಸೂಕಿ ಅವರು ತನ್ನ ಗೆಲುವನ್ನು ದಕ್ಕಿಸಿಕೊಳ್ಳುವುದು ಸುಲಭಸಾಧ್ಯವಾಗಿಲ್ಲ.

ಎನ್‍ಎಲ್‍ಡಿ ಈಗಾಗಲೇ ತನ್ನ ಭದ್ರನೆಲೆಯಾದ ಯಾಂಗೂನ್‍ನಲ್ಲಿ ಕೆಳಗಿನ ಮನೆಯ 12 ಸ್ಥಾನಗಳನ್ನು ಹಾಗೂ ಮೇಲ್ಮನೆಯ 15 ಸ್ಥಾನಗಳನ್ನು ದಕ್ಕಿಸಿಕೊಂಡಿದೆ. ಗೆಲುವಿನಿಂದ ಪುಳಕಿತರಾಗಿರುವ ಸೂಕಿ ಬೆಂಬಲಿಗರು ಮಾ್ಯನ್ಮಾರ್‍ನ ಬೀದಿಗಳಲ್ಲಿ ಸಂಭ್ರಮಾ ಚರಣೆ ಆರಂಬಿsಸಿದ್ದಾರೆ. ಸರ್ಕಾರಿ ವಾರ್ತಾಪತ್ರ `ಗ್ಲೋಬಲ್ ನ್ಯೂ ಲೈಟ್' ಎನ್‍ಎಲ್‍ಡಿಯ ಗೆಲುವನ್ನು `ಹೊಸ ಯುಗದ ಮುಂಬೆಳಗು' ಎಂದು ಬಣ್ಣಿಸಿದೆ.

ಮಾ್ಯನ್ಮಾರ್ ಐದು ದಶಕಗಳ ಮಿಲಿಟರಿ ಆಡಳಿತದಿಂದ 2011ರಲ್ಲಿ ಮುಕ್ತವಾಗಿ ಪ್ರಜಾಪ್ರಭುತ್ವದತ್ತ ಸಾಗಿದ್ದರೂ, ಸೇನೆಯ ಹಿಡಿತದಿಂದ ಸಂಪೂರ್ಣ ಮುಕ್ತವಾಗಿಲ್ಲ. ಇಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಶೇ.25 ಸ್ಥಾನಗಳು ಸೇನೆಯ ಬಳಿ ಇರಲಿವೆ. ಜತೆಗೆ, ಸೂಕಿಯನ್ನು ಅಧಿಕಾರದಿಂದ ಹೊರಗಿಡಲು ಸಂವಿಧಾನದಲ್ಲಿ ಕೆಲವು ನಿಯಮಗಳನ್ನು ಸೃಷ್ಟಿಸಲಾಗಿದೆ. ಅದರಂತೆ, ವಿದೇಶಿ ಸಂಗಾತಿ ಅಥವಾ ಮಕ್ಕಳನ್ನು ಹೊಂದಿರುವವರು ಇಲ್ಲಿ ಅಧ್ಯಕ್ಷ ಉಪಾಧ್ಯಕ್ಷರಾಗುವಂತಿಲ್ಲ. ಸೂಕಿಗೆ ಬ್ರಿಟಿಷ್ ಪತಿ ಮತ್ತು ಮಕ್ಕಳು ಇದ್ದಾರೆ. ಆದಾಗ್ಯೂ, ಬಹುಮತ ದೊರೆತರೆ ತಾನು ಅಧ್ಯಕ್ಷ ಪದವಿ ಗಿಂತ ಉನ್ನತ ಅಧಿಕಾರವನ್ನು ನಿಭಾಯಿಸಲಿದ್ದೇನೆ ಎಂದು ಸೂಕಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com