ಮಾಯನ್ಮಾರ್ ಯಶಸ್ವಿ ಚುನಾವಣೆ: ಭಾರತ ಸರ್ಕಾರದಿಂದ ಅಭಿನಂದನೆ

ಮಾಯನ್ಮಾರ್ ಸಾರ್ವತ್ರಿಕ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿರುವುದಕ್ಕೆ ಅಲ್ಲಿನ ಪ್ರಜೆಗಳಿಗೆ ಭಾರತ ಸರ್ಕಾರ ಅಭಿನಂದನೆ ಸಲ್ಲಿಸಿದೆ.
ಮಾಯನ್ಮಾರ್(ಸಾಂಕೇತಿಕ ಚಿತ್ರ)
ಮಾಯನ್ಮಾರ್(ಸಾಂಕೇತಿಕ ಚಿತ್ರ)

ನವದೆಹಲಿ: ಮಾಯನ್ಮಾರ್ ಸಾರ್ವತ್ರಿಕ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿರುವುದಕ್ಕೆ ಅಲ್ಲಿನ ಪ್ರಜೆಗಳಿಗೆ ಭಾರತ ಸರ್ಕಾರ ಅಭಿನಂದನೆ ಸಲ್ಲಿಸಿದೆ.
ಭಾರತದೊಂದಿಗೆ ಐತಿಹಾಸಿಕ ಸಂಬಂಧ ಹೊಂದಿರುವ ನೆರೆರಾಷ್ಟ್ರ ಪ್ರಜಾಪ್ರಭುತ್ವದೆಡೆಗೆ ಮಹತ್ವದ ಹೆಜ್ಜೆಯಿಟ್ಟಿದೆ ಎಂದು ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ. ಮಾಯನ್ಮಾರ್ ನ ಸ್ನೇಹಪರ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ಚುನಾವಣ ಆಯೋಗದಿಂದ ತ್ರಿಸದಸ್ಯ ತಂಡವನ್ನು ವೀಕ್ಷಕರಾಗಿ ನೇಮಿಸಿತ್ತು. ಎಲ್ಲಾ ಪಕ್ಷಗಳು ಚುನಾವಣೆಯ ಫಲಿತಾಂಶವನ್ನು ಗೌರವಿಸಿದೆ ಎಂದು ನಂಬಿದ್ದೇವೆ ಎಂದು ಭಾರತ ಹೇಳಿದೆ.
ಭಾನುವಾರ ನಡೆದ ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕಿ ಆಂಗ್ ಸಾನ್ ಸೂ ಕಿ ಜಯ ಗಳಿಸಿದ್ದಾರೆ ಎಂದು ಮ್ಯಾನ್ಮಾರ್ ಒಕ್ಕೂಟದ ಚುನಾವಣಾ ಆಯೋಗ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಇಲಾಖೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. 
ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದಿಂದ ಸ್ಪರ್ಧಿಸಿದ್ದ ಆಂಗ್ ಸಾನ್ ಸೂಕಿ ಪುನಾರಾಯ್ಕೆ ಆಗಿದ್ದಾರೆ. ಎನ್ ಎಲ್ ಡಿ ಅಧ್ಯಕ್ಷೆಯಾಗಿರುವ ಆಂಗ್ ಸಾನ್ ಸೂಕಿ ತಮ್ಮ ಪ್ರಮುಖ ವಿರೋಧಿ ಯು.ಕೆ ಯಾವ್ ಜಿನ್ ಹೇನ್ ವಿರುದ್ಧ ಸ್ಪರ್ಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com