ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಎಚ್1ಬಿ ವೀಸಾ ಸುಧಾರಣೆಗೆ ಮಸೂದೆ

ವೃತ್ತಿಪರರು ಕೆಲಸ ಮಾಡಲು ಅವಕಾಶ ನೀಡುವಂತಹ ಎಚ್-1ಬಿ ವೀಸಾ ಯೋಜನೆಗೆ ಸುಧಾರಣೆಗಳನ್ನು ತರಬೇಕು...

ವಾಷಿಂಗ್ಟನ್: ವೃತ್ತಿಪರರು ಕೆಲಸ ಮಾಡಲು ಅವಕಾಶ ನೀಡುವಂತಹ ಎಚ್-1ಬಿ ವೀಸಾ ಯೋಜನೆಗೆ ಸುಧಾರಣೆಗಳನ್ನು ತರಬೇಕು ಮತ್ತು ಈ ವೀಸಾ ಹೊಂದಿ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ನೀಡುವ ವೇತನವನ್ನು ಪರಿಷ್ಕರಿಸಬೇಕೆಂಬ ದ್ವಿಪಕ್ಷೀಯ ಮಸೂದೆಯನ್ನು ಸೆನೆಟ್‍ನಲ್ಲಿ ಮಂಡಿಸಲಾಗಿದೆ. 

ಈ ಮಸೂದೆ ಅಂಗೀಕಾರ ಪಡೆದರೆ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತದ ಐಟಿ ವೃತ್ತಿಪರರ ಮೇಲೆ ಪರಿಣಾಮ ಬೀರಲಿದೆ. ಸೆನೇಟ್ ನ್ಯಾಯಾಂಗ ಸಮಿತಿ ಅಧ್ಯಕ್ಷರಾದ ಸೆನೆಟರ್ ಚುಕ್ ಗ್ರಾಸ್ಲೆ ಮತ್ತು ಡೆಮಾಕ್ರಟಿಕ್ ಪಕ್ಷದ ಉಪ ನಾಯಕ ಡಿಕ್ ಡರ್ಬಿನ್ ಮಸೂದೆಯನ್ನು ಮಂಡಿಸಿದರು. 
ಈ ವೀಸಾ ಎಂದೂ ಸಹ ಅಮೆರಿಕದ ಅರ್ಹರನ್ನು ಬದಲಿಸಲು ಕಾರಣವಾಗಬಾರದು. ಈ ವೀಸಾ ಕೇವಲ ಸಿಬ್ಬಂದಿ ಕೊರತೆ ತುಂಬುವ ಮತ್ತು ಅತ್ಯು-ತ್ತನ್ನ ಅರ್ಹತೆ ಅಗತ್ಯವಿರುವ ಹುದ್ದೆಗೆ ಅಮೆರಿಕದವರು ಸಿಗದಿದ್ದಾಗ ಮಾತ್ರ ತುಂಬಲು ಅವಕಾಶ ನೀಡುವಂತಿರಬೇಕು ಎಂದು ಮಸೂದೆ ಮಂಡಿಸಿದ ಗ್ರಾಸ್ಲೆ ಹೇಳಿದ್ದಾರೆ. ನಾವು ಹಲವು ವರ್ಷಗಳಿಂದ ವಾದ ಮಾಡುತ್ತಿರುವಂತೆ ಎಚ್1ಬಿ ವೀಸಾ ಅಮೆರಿಕದ ವ್ಯವಸ್ಥೆಯನ್ನೇ ಅಣಕ ಮಾಡುವಂತಿದೆ.
ಇಲ್ಲಿನವರಿಗಿಂತಲೂ ಕಡಿಮೆ ಸ್ಕಿಲ್ ಹೊಂದಿರುವವರಿಗೆ ಮತ್ತು ಕಡಿಮೆ ವೇತನಕ್ಕೆ ವೀಸಾ ಬಳಸಲಾಗುತ್ತಿದ್ದು ಸ್ಕಿಲ್ ಹೊಂದಿರುವ ಅಮೆರಿಕನ್ನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ವೀಸಾದ ಮೂಲ ಉದ್ದೇಶವೇ ನಾಶವಾಗಿದೆ. ಹೀಗಾಗಿ ಈ ವೀಸಾ ಸುಧಾರಣೆ ಆದ್ಯತೆಯಾಗಬೇಕು ಎಂದಿದ್ದಾರೆ. ಈ ಮಸೂದೆ ಅಂಗೀಕಾರವಾದರೆ ಕಂಪನಿಯೊಂದರಲ್ಲಿ ಎಚ್1ಬಿ ಮತ್ತು ಎಲ್-1 ವೀಸಾ ಹೊಂದಿರುವವರ ಸಂಖ್ಯೆ 50 ದಾಟುವಂತಿಲ್ಲ, ಕಂಪನಿಯ ಒಟ್ಟು ಸಿಬ್ಬಂದಿಯಲ್ಲಿ ಅರ್ಧಕ್ಕಿಂತ ಹೆಚ್ಚಿರುವಂತಿಲ್ಲ.

Related Stories

No stories found.

Advertisement

X
Kannada Prabha
www.kannadaprabha.com