ಪಾಕ್‌ನಲ್ಲಿ ಹಿಂದೂಗಳ ಶೋಷಣೆಯಾದರೆ, ನಾನು ಅವರ ಪರವಾಗಿ ನಿಲ್ಲುತ್ತೇನೆ: ಷರೀಫ್

ಪಾಕಿಸ್ತಾನದಲ್ಲಿ ಹಿಂದೂಗಳನ್ನು ಮುಸ್ಲಿಂರು ಶೋಷಿಸಿದರೆ ಸರ್ಕಾರ ಹಿಂದೂಗಳ ಪರವಾಗಿ ನಿಲ್ಲುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ...
ನವಾಜ್ ಷರೀಫ್
ನವಾಜ್ ಷರೀಫ್
ಕರಾಚಿ: ಪಾಕಿಸ್ತಾನದಲ್ಲಿ ಹಿಂದೂಗಳನ್ನು ಮುಸ್ಲಿಂರು ಶೋಷಿಸಿದರೆ ಸರ್ಕಾರ ಹಿಂದೂಗಳ ಪರವಾಗಿ ನಿಲ್ಲುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. 
ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದು, ಪಾಕ್ ಹಿಂದೂಗಳ ಮೇಲೆ ದೌರ್ಜನ್ಯವಾದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಪ್ರಧಾನಿಯಾದ ನನ್ನ ಕರ್ತವ್ಯ. ಹೀಗಾಗಿ ನಾನು ಹಿಂದೂಗಳ ಪರವಾಗಿ ನಿಲ್ಲುತ್ತೇನೆ. ನಾನು ಯಾವುದೇ ಕೋಮಿನ ಪ್ರಧಾನಿಯಲ್ಲ ಬದಲಾಗಿ ಇಡೀ ದೇಶದ ಪ್ರಧಾನಿ  ಎಂದು ಹೇಳಿದ್ದಾರೆ. 
ದೀಪಾವಳಿ ಪ್ರಯುಕ್ತ ಪಾಕ್ ಹಿಂದೂಗಳು ಕರಾಚಿಯ ಹೊಟೇಲೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ದುರ್ಬಲರ ಸಹಾಯಕ್ಕೆ ನಿಲ್ಲುವಂತೆ ನನ್ನ ಧರ್ಮ ಆದೇಶಿಸಿದೆ. ವಾಸ್ತವವಾಗಿ ಇಸ್ಲಾಂ ಮಾತ್ರವಲ್ಲ, ಜಗತ್ತಿನೆಲ್ಲಾ ಧರ್ಮಗಳು ಅದನ್ನೇ ಬೋಧಿಸಿದೆ ಎಂದರು. 
ಪಾಕಿಸ್ತಾನಿಗಳೆಲ್ಲರೂ ಒಂದು ಮತ್ತು ಪಾಕಿಸ್ತಾನಿಯರೆಲ್ಲರೂ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಜಾತಿ ಧರ್ಮಗಳ ಆಧಾರದಲ್ಲಿ ಭೇದ-ಭಾವಗಳನ್ನು ನಾನು ಸಮ್ಮತಿಸುವುದಿಲ್ಲ. ಜಾತಿ ಧರ್ಮಗಳ ಸರಹದ್ದು ತೊರೆದು ಒಗ್ಗಟ್ಟಾಗುವ ಸಂದರ್ಭ ಬಂದಿದೆ. ಹಿಂದೂಗಳ ಸಂಭ್ರಮದಲ್ಲಿ ಮುಸ್ಲಿಮರು ಪಾಲ್ಗೊಂಡು ಸೌಹಾರ್ದ ಮೆರೆಯಬೇಕೆಂದು ಎಂದು ಷರೀಫ್ ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com