ಭಾರತೀಯ ಮೂಲದ ಕೆನಡಾ ಸಚಿವರ ವಿರುದ್ಧ ಜನಾಂಗೀಯ ನಿಂದನೆ ಆರೋಪ, ತನಿಖೆಗೆ ಆದೇಶ

ಭಾರತೀಯ ಮೂಲದ ಕೆನಡಾ ದೇಶದ ರಕ್ಷಣಾ ಸಚಿವ ಹರ್ಜಿತ್ ಸಜ್ಜನ್ ವಿರುದ್ಧ ಜನಾಂಗೀಯ ನಿಂದನೆಯ ಗಂಭೀರ ಆರೋಪ ಕೇಳಿ ಬಂದಿದ್ದು, ತನಿಖೆ ಆದೇಶಿಸಲಾಗಿದೆ...
ಜನಾಂಗೀಯ ನಿಂದನೆ ಆರೋಪ ಎದುರಿಸುತ್ತಿರುವ ಹರ್ಜಿತ್ ಸಜ್ಜನ್ (ಸಂಗ್ರಹ ಚಿತ್ರ)
ಜನಾಂಗೀಯ ನಿಂದನೆ ಆರೋಪ ಎದುರಿಸುತ್ತಿರುವ ಹರ್ಜಿತ್ ಸಜ್ಜನ್ (ಸಂಗ್ರಹ ಚಿತ್ರ)

ಟೊರಾಂಟೋ: ಭಾರತೀಯ ಮೂಲದ ಕೆನಡಾ ದೇಶದ ರಕ್ಷಣಾ ಸಚಿವ ಹರ್ಜಿತ್ ಸಜ್ಜನ್ ವಿರುದ್ಧ ಜನಾಂಗೀಯ ನಿಂದನೆಯ ಗಂಭೀರ ಆರೋಪ ಕೇಳಿ ಬಂದಿದ್ದು, ತನಿಖೆ ಆದೇಶಿಸಲಾಗಿದೆ.

ಮೂಲಗಳ ಪ್ರಕಾರ ಭಾರತೀಯ ಮೂಲದ ಹರ್ಜಿಸ್ ಸಜ್ಜನ್ ಅವರು ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಕೆನಡಾದ ಸೈನಿಕನೋರ್ವನಿಗೆ ಜನಾಂಗೀಯವಾಗಿ ನಿಂದಿಸಿದ್ದಾರೆ  ಎಂದು ತಿಳಿದುಬಂದಿದೆ. ಸಜ್ಜನ್ ಅವರು ಸೈನಿಕನನ್ನು ಆತನ ಸಾಂಪ್ರದಾಯಿಕ ಹಿನ್ನಲೆಯನ್ನು ಕೇಂದ್ರವಾಗಿರಿಸಿಕೊಂಡು ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅವರ  ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಸಿಖ್ಖ್ ಸಮುದಾಯಕ್ಕೆ ಸೇರಿದ ಹರ್ಜಿತ್ ಸಜ್ಜನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಓರ್ವ ಸೈನಿಕನ ಸಾಂಸ್ಕೃತಿಕ ಸಂಪ್ರಾದಯದ ಕುರಿತಂತೆ ಅವಹೇಳನಕಾರಿಯಾಗಿ ಬರೆದಿದ್ದರು. ಇದಕ್ಕೆ  ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಕೂಡಲೇ ಅದನ್ನು ತೆಗೆದು ಹಾಕಲಾಗಿತ್ತು. ಇನ್ನು ಜನಾಂಗೀಯ ನಿಂದನೆಗೊಳಗಾದ ಸೈನಿಕನ ಗುರುತನ್ನು ಕೆನಡಾ ಸರ್ಕಾರ ಗುಪ್ತವಾಗಿಟ್ಟಿದ್ದು,  ತನಿಖಾ ದೃಷ್ಟಿಯಿಂದ ಮತ್ತು ಇತರೆ ಸಮುದಾಯದಿಂದ ಎದುರಿಸಬಹುದಾದ ಪ್ರತಿಭಟನೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com