ಅಮೆರಿಕ ಡ್ರೋಣ್ ದಾಳಿ: ಇಸಿಸ್ ಉಗ್ರ ನರಹಂತಕ ಜಿಹಾದಿ ಜಾನ್ ಹತ್ಯೆ?

ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ನಡೆಸಿದ ಶಿರಚ್ಛೇದ ವಿಡಿಯೊಗಳಲ್ಲಿ ಕಾಣಿಸಿಕೊಂಡಿದ್ದ ‘ಜಿಹಾದಿ ಜಾನ್‌’ ನನ್ನು ಅಮೆರಿಕ ಡ್ರೋಣ್ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ವಾಯುಸೇನೆ...
ಜಿಹಾದಿ ಜಾನ್
ಜಿಹಾದಿ ಜಾನ್
ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ನಡೆಸಿದ ಶಿರಚ್ಛೇದ ವಿಡಿಯೊಗಳಲ್ಲಿ ಕಾಣಿಸಿಕೊಂಡಿದ್ದ ‘ಜಿಹಾದಿ ಜಾನ್‌’ ನನ್ನು ಅಮೆರಿಕ ಡ್ರೋಣ್ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಹಾದಿ ಜಾನ್ ಮೂಲ ಹೆಸರು ಮೊಹಮ್ಮದ್‌ ಎಮ್‌ವಾಜಿ. ಈತ ಬ್ರಿಟನ್‌ನ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದು, ಈತ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ನಲ್ಲಿ ಪದವಿ ಪಡೆದಿದ್ದ. ಸಿರಿಯಾದ ರಖ್ ನಲ್ಲಿ ಅಮೆರಿಕ ವಾಯುಸೇನೆ ನಡೆಸಿದ ದಾಳಿ ವೇಳೆ ಜಿಹಾದಿ ಜಾನ್ ಮೃತಪಟ್ಟಿರುವುದಾಗಿ ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ.
ಜಿಹಾದಿ ಜಾನ್ ಮೃತಪಟ್ಟಿರುವುದಾಗಿ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಕಳೆದ ರಾತ್ರಿ ಅಮೆರಿಕ ಸೇನೆ ನಡೆಸಿದ ವಾಯುದಾಳಿಯಲ್ಲಿ ಜಿಹಾದಿ ಜಾನ್ ಮೃತಪಟ್ಟಿರುವ ಬಗ್ಗೆ ಅಮೆರಿಕ ನಂಬಿಕೆ ವ್ಯಕ್ತಪಡಿಸಿದ್ದಾರೆ. 
ಹಿಂದೆ ಇಸ್ಲಾಮಿಕ್ ಸ್ಟೇಟ್‌ ಉಗ್ರರು ಬಿಡುಗಡೆ ಮಾಡಿದ್ದ ಅಮೆರಿಕ ಮತ್ತು ಬ್ರಿಟನ್‌ ಪ್ರಜೆಗಳ ಶಿರಚ್ಛೇದದ ವಿಡಿಯೊಗಳಲ್ಲಿ ಕಪ್ಪು ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಬ್ರಿಟಿಷ್‌ ಶೈಲಿಯಲ್ಲಿ ಇಂಗ್ಲಿಷ್‌ ಮಾತನಾಡುತ್ತಿದ್ದ. ಈತನೇ ಶಿರಚ್ಛೇದ ಮಾಡಿದ್ದಾನೆ ಎಂದು ನಂಬಲಾಗಿತ್ತು. ಈತನನ್ನು ‘ಜಿಹಾದಿ ಜಾನ್‌’ ಎಂದು ಹೆಸರಿಸಲಾಗಿತ್ತು.
ಜಿಹಾದಿ ಜಾನ್ 2012ರಲ್ಲಿ ಸಿರಿಯಾಕ್ಕೆ ಹೋಗಿದ್ದಾನೆ. ನಂತರ ಆತ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com