ವಿಶ್ವ ನಾಯಕರಿಂದ ಪ್ಯಾರೀಸ್ ದಾಳಿ ಖಂಡನೆ

ಪ್ಯಾರೀಸ್ ನಲ್ಲಿ ನಡೆದ ಉಗ್ರರ ಅಟ್ಟಹಾಸವನ್ನು ಈಗಾಗಲೇ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಎಲ್ಲಾ ನಾಯಕರು ಶನಿವಾರ ಖಂಡಿಸಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬರಾಕ್ ಒಬಾಮಾ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬರಾಕ್ ಒಬಾಮಾ (ಸಂಗ್ರಹ ಚಿತ್ರ)

ಪ್ಯಾರೀಸ್: ಪ್ಯಾರೀಸ್ ನಲ್ಲಿ ನಡೆದ ಉಗ್ರರ ಅಟ್ಟಹಾಸವನ್ನು ಈಗಾಗಲೇ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಎಲ್ಲಾ ನಾಯಕರು ಶನಿವಾರ ಖಂಡಿಸಿದ್ದಾರೆ.

ದಾಳಿಯನ್ನು ಖಂಡಿಸಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಜನರ ನೋವಿಗಾಗಿ ನನ್ನ ಹೃದಯ ಕಂಬನಿ ಮಿಡಿಯುತ್ತಿದ್ದು, ದಾಳಿ ಕುರಿತಂತೆ ಫ್ರಾನ್ಸ್ ಜೊತೆ ಕೈ ಜೊಡಿಸುವುದಾಗಿ ಹೇಳಿದ್ದಾರೆ. 

ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಫ್ರಾನ್ಸ್ ದಾಳಿಯೊಂದು ಘೋರ ಕೃತ್ಯವಾಗಿದ್ದು, ದಾಳಿ ಬಹಳ ದುಃಖವನ್ನುಂಟು ಮಾಡಿದೆ. ಸಾವನ್ನಪ್ಪಿದ್ದ ಜನರ ಕುಟುಂಬಕ್ಕಾಗಿ ಪ್ರಾರ್ಥನೆ ಮಾಡಲಾಗುತ್ತದೆ ಹಾಗೂ ಫ್ರಾನ್ಸ್ ಜೊತೆ ಕೈ ಜೋಡಿಸುವುದಾಗಿ ತಿಳಿಸಿದ್ದಾರೆ.

ಇದರಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಸಹ ಪ್ರತಿಕ್ರಿಯೆ ನೀಡಿದ್ದು, ಫ್ರಾನ್ಸ್ ನಲ್ಲಿ ಮತ್ತೊಮ್ಮೆ ಉಗ್ರರು ಕ್ರೂರತ್ವವನ್ನು ಮೆರೆದಿದ್ದಾರೆ. ಅಮಾಯಕ ನಾಗರೀಕರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿ ಪ್ಯಾರೀಸ್ ಹಾಗೂ ಫ್ರಾನ್ಸ್ ಜನತೆ ಮಾಡಿದ ದಾಳಿ ಮಾತ್ರವಲ್ಲ. ಇದೊಂದು ಮಾನವೀಯತೆ ಹಾಗೂ ಸಾರ್ವತ್ರಿಕ ಮೌಲ್ಯಗಳ ಮೇಲೆ ಮಾಡಿದ ದಾಳಿಯಾಗಿದೆ ಎಂದು ಹೇಳಿದ್ದಾರೆ.

ಪ್ಯಾರೀಸ್ ದಾಳಿ ನಿಜಕ್ಕೂ ಆತಂಕ ಹಾಗೂ ಆಶ್ಚರ್ಯವನ್ನುಂಟು ಮಾಡಿದೆ ಎಂದು ಹೇಳಿರುವ ಜರ್ಮನಿ ವರ್ಕಾರ ಏಂಜೆಲಾ ಮಾರ್ಕೆಲ್ ದಾಳಿಗೆ ಸಹಾನುಭೂತಿ ಸೂಚಿಸಿದ್ದು, ಫ್ರಾನ್ಸ ಜೊತೆ ಕೈ ಜೊಡಿಸುವುದಾಗಿ ಹೇಳಿದ್ದಾರೆ.

ಆಸ್ಟೇಲಿಯಾ ವಿದೇಶಾಂಗ ಸಚಿವ ಸೆಬಾಸ್ಟಿಯನ್ ಕುರ್ಜ್ ಅವರು, ಉಗ್ರರ ದಾಳಿ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡಿತು. ಉಗ್ರರನ್ನು ಮಟ್ಟಹಾಕಲು ಫ್ರಾನ್ಸ್ ಜೊತೆ ಕೈ ಜೋಡಿಸುವುದಾಗಿ ಹೇಳಿದ್ದಾರೆ.

ಉಗ್ರರ ದಾಳಿ ಆಶ್ಚರ್ಯವನ್ನುಂಟು ಮಾಡಿತು. ಫ್ರೆಂಜ್ ಜನರಿಗಾಗಿ ಅವರ ಕುಟುಂಬಕ್ಕಾಗಿ ಪ್ರಾರ್ಥನೆ ಮಾಡಲಾಗುತ್ತದೆ. ಫ್ರಾನ್ಸ್ ಗೆ ಬೇಕಾಗುವ ಎಲ್ಲಾ ರೀತಿಯ ಸಹಾಯವನ್ನು ನಾವು ಮಾಡಲು ಸಿದ್ಧರಿದ್ದೇವೆಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com