ಲಂಚ ನೀಡಿದ್ದಕ್ಕೆ 77 ಕೋಟಿ ದಂಡ..!

ವಿವಿಧ ದೇಶಗಳಲ್ಲಿ ಅಧಿಕಾರಿಗಳಿಗೆ ಲಂಚ ನೀಡಿರುವುದಕ್ಕೆ ಫ್ರಾನ್ಸ್ ನ ಬಹುರಾಷ್ಟ್ರೀಯ ಕಂಪನಿ ಅಲ್ಸ್ ಟಾಮ್ ಎಸ್‍ಎಗೆ ಅಮೆರಿಕದ ನ್ಯಾಯಾಲಯ 77.2 ಕೋಟಿ ಡಾಲರ್ ದಂಡ ವಿಧಿಸಿದೆ...
ಅಲ್ಸ್ ಟಾಮ್ ಸಂಸ್ಥೆ (ಸಂಗ್ರಹ ಚಿತ್ರ)
ಅಲ್ಸ್ ಟಾಮ್ ಸಂಸ್ಥೆ (ಸಂಗ್ರಹ ಚಿತ್ರ)

ವಾಷಿಂಗ್ಟನ್: ವಿವಿಧ ದೇಶಗಳಲ್ಲಿ ಅಧಿಕಾರಿಗಳಿಗೆ ಲಂಚ ನೀಡಿರುವುದಕ್ಕೆ ಫ್ರಾನ್ಸ್ ನ ಬಹುರಾಷ್ಟ್ರೀಯ ಕಂಪನಿ ಅಲ್ಸ್ ಟಾಮ್ ಎಸ್‍ಎಗೆ ಅಮೆರಿಕದ ನ್ಯಾಯಾಲಯ 77.2 ಕೋಟಿ ಡಾಲರ್ ದಂಡ  ವಿಧಿಸಿದೆ.

ಅಂತಾರಾಷ್ಟ್ರೀಯ ಲಂಚ ಆರೋಪದ ಹಿನ್ನೆಲೆಯಲ್ಲಿ ಈ ದಂಡ ವಿಧಿಸಲಾಗಿದೆ. ಕಂಪನಿ ಇಂಡೋನೇಷಿಯಾ, ಸೌದಿ ಅರೇಬಿಯಾ, ಈಜಿಪ್ಟ್, ತೈವಾನ್ ಮತ್ತಿತರ ದೇಶಗಳಲ್ಲಿ ಅಧಿಕಾರಿಗಳಿಗೆ  ಲಂಚ ನೀಡಿತ್ತು. ಪ್ರಕರಣ ಕುರಿತು ವಿಚಾರಣೆ ನಡೆಸಿದ ಇಲ್ಲಿನ ಕನೆಕ್ಟಿಕಟ್ ಜಿಲ್ಲಾ ನ್ಯಾಯಾಲಯ ದಂಡ ವಿಧಿಸಿ ಆದೇಶಿಸಿದೆ. ಭಾರತೀಯ ರೈಲ್ವೆಗೆ 800 ಎಂಜಿನ್‍ಗಳನ್ನು ಸರಬರಾಜು ಮಾಡುವ ಬಹುಕೋಟಿ ಒಪ್ಪಂದವನ್ನು ಕಂಪನಿ ಇತ್ತೀಚೆಗಷ್ಟೆ ಪಡೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com