ಪ್ಯಾರಿಸ್: ಶುಕ್ರವಾರ 129 ಜನರ ಸಾವಿಗೆ ಕಾರಣವಾದ ಪ್ಯಾರಿಸ್ ದಾಳಿಯ ರುವಾರಿಯನ್ನು ಪತ್ತೆ ಮಾಡಲು ಪೊಲೀಸರು ಶೋಧ ನಡೆಸುತ್ತಿದ್ದ ವೇಳೆ ಬುಧವಾರ ಮುಂಜಾನೆ ಉತ್ತರ ಪ್ಯಾರಿಸ್‌ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಬುಧವಾರ ಮುಂಜಾನೆ 4.30ರ ವೇಳೆಗೆ ಉಗ್ರರು ಸೈಂಟ್ ಡೆನಿಸ್ ನಲ್ಲಿ ದಾಳಿ ನಡೆಸಿದ್ದು, ಇದರಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿವೆ. ಪ್ರಸ್ತುತ ದಾಳಿಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.
ದಾಳಿ ನಡೆದ ಪ್ರದೇಶದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದು, ಹೆಲಿಕಾಪ್ಟರ್, ಆ್ಯಂಬುಲೆನ್ಸ್ ಮತ್ತು ಪೊಲೀಸ್ ಕಾರುಗಳು ಮಾತ್ರ ಅಲ್ಲಿ ಓಡಾಡುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.