ಬ್ರೆಜಿಲ್ ನಲ್ಲಿ ಪೊಲೀಸ್ ಸರ್ಪಗಾವಲು
ವಿದೇಶ
ಉಗ್ರರ ಭೀತಿ ಹಿನ್ನೆಲೆ ಬೆಲ್ಜಿಯಂನ ಬ್ರುಸ್ಸೆಲ್ಸ್‌ನಲ್ಲಿ ಹೈ ಅಲರ್ಟ್
ಫ್ರಾನ್ಸ್‌ನ ಪ್ಯಾರೀಸ್ ನಲ್ಲಿ ಐಸಿಸ್ ಉಗ್ರರು ಅಟ್ಟಹಾಸ ಮೆರೆದ ಬೆನ್ನಲ್ಲೇ ಇದೀಗ ಬೆಲ್ಜಿಯಂನಲ್ಲಿ ಉಗ್ರ ದಾಳಿಯ ಬೆದರಿಕೆ ಹಾಕಲಾಗಿದೆ. ...
ಬ್ರುಸ್ಸೆಲ್ಸ್ : ಫ್ರಾನ್ಸ್‌ನ ಪ್ಯಾರೀಸ್ ನಲ್ಲಿ ಐಸಿಸ್ ಉಗ್ರರು ಅಟ್ಟಹಾಸ ಮೆರೆದ ಬೆನ್ನಲ್ಲೇ ಇದೀಗ ಬೆಲ್ಜಿಯಂನಲ್ಲಿ ಉಗ್ರ ದಾಳಿಯ ಬೆದರಿಕೆ ಹಾಕಲಾಗಿದೆ.
ಉಗ್ರರ ಸಂಭಾವ್ಯ ದಾಳಿ ನಡೆಯುವ ಸಾದ್ಯತೆ ಇರುವುದರಿಂದ ಬ್ರುಸ್ಸೆಲ್ಸ್‌ನಲ್ಲಿ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಜನರು ಗುಂಪು ಗೂಡದಂತೆ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಶನಿವಾರ ರಾಜಧಾನಿ ಬ್ರುಸ್ಸೆಲ್ಸ್ ಸೇರಿದಂತೆ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಸಚಿವರು ,ಪೊಲೀಸರ ಉನ್ನತ ಸಭೆ ನಡೆಸಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಶಾಪಿಂಗ್ ಮಾಲ್, ರೈಲ್ವೆ ನಿಲ್ದಾಣ. ಬಸ್ ನಿಲ್ದಾಣ ಏರ್ ಪೋರ್ಟ್ ಗಳಲ್ಲಿ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ