ಉಗ್ರ ನಿಗ್ರಹಕ್ಕೆ ದನಿ

ಜಿ20 ಶೃಂಗದಂತೆ ಪ್ರಧಾನಿ ನರೇಂದ್ರ ಮೋದಿ ಮಲೇಷ್ಯಾದಲ್ಲಿ ನಡೆಯುತ್ತಿರುವ ಆಸಿಯಾನ್ ಸಮ್ಮೇಳನದಲ್ಲೂ ಭಯೋತ್ಪಾದನೆ ಕುರಿತು ಧ್ವನಿ ಎತ್ತಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ಕೌಲಾಲಂಪುರ: ಜಿ20 ಶೃಂಗದಂತೆ ಪ್ರಧಾನಿ ನರೇಂದ್ರ ಮೋದಿ ಮಲೇಷ್ಯಾದಲ್ಲಿ ನಡೆಯುತ್ತಿರುವ ಆಸಿಯಾನ್ ಸಮ್ಮೇಳನದಲ್ಲೂ ಭಯೋತ್ಪಾದನೆ ಕುರಿತು ಧ್ವನಿ ಎತ್ತಿದ್ದಾರೆ.

ಭಯೋತ್ಪಾದನೆ ಈಗ ಜಾಗತಿಕ ಸವಾಲಾಗಿ ಪರಿಣಮಿಸುತ್ತಿದೆ. ಈ ಸವಾಲು ಎದುರಿಸಲು ಆಸಿಯಾನ್ ರಾಷ್ಟ್ರಗಳ ಹೆಚ್ಚಿನ ಸಹಭಾಗಿತ್ವ ಬೇಕಿದೆ. ಗಡಿ ವಿವಾದಗಳನ್ನು ಶಾಂತಿಯುತ ಮಾರ್ಗಗಳ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ. ಆಸಿಯಾನ್ ರಾಷ್ಟ್ರಗಳ ನಡುವೆ ಮತ್ತಷ್ಟು ಸಹಭಾಗಿತ್ವದ ಅಗತ್ಯವನ್ನು ಒತ್ತಿ ಹೇಳಿದ ಅವರು, ಸಮುದ್ರಯಾನದ ಸುರಕ್ಷತೆ, ಬೌದಿಟಛಿಕ ಹಕ್ಕು ಸ್ವಾಮ್ಯದ ರಕ್ಷಣೆ ಮತ್ತು ವಿಕೋಪ ಪರಿಹಾರ ಕಾರ್ಯದಂಥ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರಕ್ಕೆ ವಿಶೇಷ ಯೋಜನೆಯನ್ನು ರೂಪಿಸುವ ಅಗತ್ಯವನ್ನೂ ಅವರು ಶನಿವಾರ ಆಸಿಯಾನ್ ಸಮ್ಮೇಳನ ದಲ್ಲಿ ತಿಳಿಸಿದ್ದಾರೆ.

ಪ್ಯಾರಿಸ್, ಮಾಲಿ ಮೇಲೆ ಇತ್ತೀಚೆಗೆ ನಡೆದ ದಾಳಿಯನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದ ಮೋದಿ, ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿ ಬೆಳೆಯುತ್ತಿದೆ. ಇದರ ಪರಿಣಾಮ ಆಸಿಯಾನ್ ರಾಷ್ಟ್ರಗಳ ಮೇಲೂ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಯೋತ್ಪಾದನೆ ನಿಗ್ರಹಕ್ಕೆ ಆಸಿಯಾನ್ ರಾಷ್ಟ್ರಗಳು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಸಹಭಾಗಿತ್ವ ಪ್ರದರ್ಶಿಸಬೇಕು ಎಂದು ಹೇಳಿದ್ದಾರೆ. ಇದೇ ವೇಳೆ, ಭಾರತವು ಸದ್ಯದಲ್ಲೇ ಆಸಿಯಾನ್ ರಾಷ್ಟ್ರಗಳಿಗೂ ಎಲೆಕ್ಟ್ರಾನಿಕ್ ವೀಸಾ ಸೌಲಭ್ಯವನ್ನು ಕಲ್ಪಿಸಲಿದೆ ಎಂದು ಮೋದಿ ಘೋಷಿಸಿದ್ದಾರೆ. ವಿಜ್ಞಾನ ಮತ್ತು ಆವಿಷ್ಕಾರ, ಭಾರತ ಮತ್ತು ಆಸಿಯಾನ್ ಸಹಕಾರ ಮತ್ತು ಆರ್ಥಿಕ ಸಹಭಾಗಿತ್ವದ ಪ್ರಮುಖ ಆಧಾರ ಸ್ತಂಭಗಳು. ಇದರಿಂದ ಸಂಶೋಧನೆ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಪ್ರೋತ್ಸಾಹ ಸಿಗಲಿದೆ ಎಂದು ಮೋದಿ ತಿಳಿಸಿದ್ದಾರೆ.

ತಲೆಕೆಳಗಾಗಿ ಹಾರಿದ ತ್ರಿವರ್ಣ ಧ್ವಜ!
ಪಿಎಂ ಮೋದಿ ಹಾಗೂ ಜಪಾನ್ ಪ್ರಧಾನಿ ಶಿನ್ಜೋ ಅಬೆ ಪರಸ್ಪರ ಕೈಕುಲುಕುವ ವೇಳೆ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾರಿಸುವ ಮೂಲಕ ಭಾರತ ತೀವ್ರ ಮುಜುಗರಕ್ಕೊಳಗಾದ ಘಟನೆ ಶನಿವಾರ ನಡೆದಿದೆ. ದ್ವಿಪಕ್ಷೀಯ ಮಾತುಕತೆಗೂ ಮುನ್ನ ಫೋಟೋಗಾಗಿ ಉಭಯ ನಾಯಕರು ಹಸ್ತಲಾಘವ ನೀಡುವ ವೇಳೆ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಇದೊಂದು ತರಾತುರಿಯಲ್ಲಾದ ಉದ್ದೇಶಪೂರ್ವಕವಲ್ಲದ ತಪ್ಪು. ಭಾರತೀಯ ತ್ರಿವರ್ಣ ಧ್ವಜ ಈ ರೀತಿ ತಲೆಕೆಳಗಾಗಿ ಪ್ರದರ್ಶನಗೊಂಡಿರುವುದು ದುರದೃಷ್ಟಕರ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com