ಇಸಿಸ್ ವಿರುದ್ಧ ಮುಂದುವರೆದ ರಷ್ಯಾ ವಾಯುದಾಳಿ, 14 ಉಗ್ರರ ಸಾವು

ಪ್ಯಾರಿಸ್ ದಾಳಿ ಬಳಿಕ ಇಸಿಸ್ ಉಗ್ರರ ವಿರುದ್ಧದ ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾ ಸೇನೆ ಸೋಮವಾರ ಮತ್ತೆ 14 ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ...
ಸಿರಿಯಾದಲ್ಲಿ ರಷ್ಯಾ ಸೇನೆಯಿಂದ ವೈಮಾನಿಕ ದಾಳಿ (ಸಂಗ್ರಹ ಚಿತ್ರ)
ಸಿರಿಯಾದಲ್ಲಿ ರಷ್ಯಾ ಸೇನೆಯಿಂದ ವೈಮಾನಿಕ ದಾಳಿ (ಸಂಗ್ರಹ ಚಿತ್ರ)

ಮಾಸ್ಕೋ: ಪ್ಯಾರಿಸ್ ದಾಳಿ ಬಳಿಕ ಇಸಿಸ್ ಉಗ್ರರ ವಿರುದ್ಧದ ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾ ಸೇನೆ ಸೋಮವಾರ ಮತ್ತೆ 14 ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ.

ಸೋಮವಾರ ಸಿರಿಯಾದ ಉತ್ತರ ಕಾಕಸಸ್ ಪ್ರದೇಶದಲ್ಲಿ ರಷ್ಯಾ ನಡೆಸಿದ ಎರಡು ವಿಶೇಷ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ಐಎಸ್ ಉಗ್ರರ ಸಂಪರ್ಕವಿರುವ 14  ಮಂದಿ ಹೋರಾಟಗಾರರನ್ನು ರಷ್ಯಾ ಭದ್ರತಾ ಸಿಬ್ಬಂದಿ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ. ನಾಲ್ಚಿಕ್‍ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 11 ಮಂದಿ ಸಾವನ್ನಪ್ಪಿದ್ದರೆ, ಎರಡನೇ  ಕಾರ್ಯಾಚರಣೆ ವೇಳೆ ಮೂವರು ಉಗ್ರರು ಸಾವನ್ನಪ್ಪಿದ್ದಾರೆ.

ದಾಳಿ ವೇಳೆ ಭಯೋತ್ಪಾದಕರು ಭಾರಿ ಶಸ್ತ್ರಾಸ್ತ್ರ ಹೊಂದಿದ್ದ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಇಸಿಸ್ ಉಗ್ರರು ರಷ್ಯಾಗೆ ಸೇರಿದ  ಪ್ರಯಾಣಿಕ ಜೆಟ್ ವಿಮಾನವನ್ನು ಹೊಡೆದುರುಳಿಸಿ 224 ಮಂದಿ ಸಾವಿಗೆ ಕಾರಣರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com