ಕೌಲಾಲಂಪುರ: ಮೂರು ದಿನಗಳ ಮಲೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ಮಲೇಷ್ಯಾದಲ್ಲಿ ಅಧಿಕೃತವಾಗಿ ಸ್ವಾಗತಿಸಲಾಗಿದೆ.
ರಾಜಧಾನಿ ಕೌಲಾಲಂಪುರದಲ್ಲಿ ಸಮೀದಲ್ಲಿರುವ ಪುತ್ರಜಯಾದಲ್ಲಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಮಲೇಷ್ಯಾ ಪ್ರಧಾನಿ ನಜೀಬ್ ತುನ್ ಅಬ್ದುಲ್ ರಜಾಕ್ ಹಾಗೂ ರಾಜತಾಂತ್ರಿಕ ಅಧಿಕಾರಿಗಳು ಮೋದಿ ಅವರನ್ನು ಸ್ವಾಗತಿಸಿದ್ದು, ಸೇನಾ ಗೌರವ ವಂದನೆ ನೀಡಲಾಯಿತು.
ಇಂದು ಉಭಯ ದೇಶಗಳ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಹಲವು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ.
ಕಳೆದ ಎರಡು ದಿನಗಳ ಹಿಂದೆ ಮಲೇಷ್ಯಾ ತಲುಪಿದ್ದ ಮೋದಿ, ಆಸಿಯಾನ್ ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದರು.