
ಲಿಮಾ: ದಕ್ಷಿಣ ಅಮೆರಿಕದ ಪೂರ್ವ ಪೆರು ಮತ್ತು ಬ್ರೆಜಿಲ್ ದೇಶಗಳಲ್ಲಿ ಎರಡು ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.5ರ ತೀವ್ರತೆ ದಾಖಲಾಗಿದೆ.
ಬುಧವಾರ ಸ್ಥಳೀಯ ಕಾಲಮಾನ ಬೆಳಗ್ಗೆ 5.45ರ ಸುಮಾರಿನಲ್ಲಿ ಪೂರ್ವ ಪೆರುವಿನ ರಾಝಧಾನಿ ಲಿಮಾದ 601 ಕಿ.ಮೀ ಅಡಿಯಲ್ಲಿ ಮೊದಲ ಭೂಕಂಪನ ಸಂಭವಿಸಿದ್ದು, ಇದಾದ ಕೇವಲ 5 ನಿಮಿಷಗಳ ಬಳಿಕ ಮತ್ತೆ ಅದೇ ಪ್ರದೇಶದಲ್ಲಿ ಅದೇ ಪ್ರಮಾಣದ ಕಂಪನ ಸಂಭವಿಸಿದೆ ಎಂದು ತಜ್ಞರು ತಿಳಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.6 ತೀವ್ರತೆ ದಾಖಲಾಗಿದ್ದು, ಕಂಪನದಿಂದ ಯಾವುದೇ ಸಾವು-ನೋವು ಸಂಭವಿಸಿದ ಕುರಿತು ಮಾಹಿತಿಗಳ ಲಭ್ಯವಾಗಿಲ್ಲ.
ಪೆರುವಿನ ಪ್ರಮುಖ ಕುಸ್ಕೊ, ಟ್ಯಾಕ್ನಾ, ಅರೆಕ್ವಿಪಾ, ಉತ್ತರ ಚಿಲಿ ಮತ್ತು ಪುಕಲ್ಪಾನಗರಗಳಲ್ಲಿನ ಕೆಲ ಬಹು ಅಂತಸ್ತಿನ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಅಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ. ಇದಲ್ಲದೆ ಅರ್ಜೆಂಟೀನಾ, ಬೊಲಿವಿಯಾ, ಕೊಲಂಬಿಯಾ ಮತ್ತು ವೆನುಜುವೆಲಾಗಳಲ್ಲಿಯೂ ಕಂಪನದ ಅನುಭವವಾದ ಕುರಿತು ಮಾಹಿತಿ ಲಭ್ಯವಾಗಿವೆ. ಸಮುದ್ರ ಮಟ್ಟದಿಂದ ತುಂಬಾ ಆಳದಲ್ಲಿ ಭೂಕಂಪನ ಸಂಭವಿಸಿರುವುದರಿಂದ ಹೆಚ್ಚೇನು ಅಪಾಯವಿಲ್ಲ ಎಂದು ಭೂಕಂಪನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ
Advertisement