ಎಚ್1ಬಿ ವೀಸಾ ಶುಲ್ಕ ರದ್ದು
ವಾಷಿಂಗ್ಟನ್: ಭಾರತದ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ದೊಡ್ಡ ನಿರಾಳ ತಂದಿದೆ. ಅಮೆರಿಕ ಸರ್ಕಾರ ಭಾರತದಿಂದ ಆಗಮಿಸುವ ವೃತ್ತಿಪರರಿಗೆ ನೀಡುವ ವೀಸಾ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ರದ್ದುಗೊಳಿಸಿದೆ.
ಅಮೆರಿಕದ ಕಾಂಗ್ರೆಸ್‍ನಲ್ಲಿ ಬಹುಮತ ಹೊಂದಿರುವ ರಿಪಬ್ಲಿಕನ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪ್ರತಿ ಎಚ್1ಬಿ ವೀಸಾಗೆ ಅಮೆರಿಕದ 2,000 ಡಾಲರ್(ಸುಮಾರು ರು.1.20 ಲಕ್ಷ) ಶುಲ್ಕ ವಿಧಿಸುತ್ತಿತ್ತು. ಇದು ಭಾರತದ ಐಟಿ ಕಂಪನಿಗಳಿಗೆ ಭಾರಿ ಹೊರೆಯಾಗಿತ್ತು. ಭಾರತದ ಕಂಪನಿಗಳು ಈ ವರ್ಷ ಮಾತ್ರವೇ ಎಚ್1ಬಿ ವೀಸಾ ಶುಲ್ಕವಾಗಿ ಸುಮಾರು ರು.2,330 ಕೋಟಿವರೆಗೂ ಪಾವತಿಸಿವೆ.
ಅಮೆರಿಕ ಸರ್ಕಾರದ ಈ ನೀತಿ ವಿರುದ್ಧ ಭಾರತದ ಐಟಿ ಕಂಪನಿಗಳು, ಕೇಂದ್ರ ಸರ್ಕಾರ ಸತತವಾಗಿ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದ್ದವು. ಭಾರತೀಯ ಐಟಿ ಕಂಪನಿಗಳ ಒಕ್ಕೂಟ ಈ ವಿಷಯವನ್ನು ಉನ್ನತ ಮಟ್ಟದಲ್ಲಿ ಚರ್ಚೆಗೆ ಎತ್ತಿಕೊಂಡಿತ್ತು. ಅಮೆರಿಕ ವಿಧಿಸುತ್ತಿರುವ ಈ ಶುಲ್ಕ ನ್ಯಾಯಸಮ್ಮತವಲ್ಲ ಎಂದು ನಾಸ್ಕಾಂ ಅಧ್ಯಕ್ಷ ಆರ್.ಚಂದ್ರಶೇಖರ್ ಇತ್ತೀಚೆಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ