ವಿವಾದ ಸೃಷ್ಟಿಸಿದ ಸಲಿಂಗಿ ಪೋಪ್ ಭೇಟಿ

ಕಳೆದ ತಿಂಗಳು ಪೋಪ್ ಅಮೆರಿಕ ಭೇಟಿ ನೀಡಿದಾಗ ಒಂದು ಅಚ್ಚರಿಯ ಘಟನೆ ನಡೆದಿದೆ. ಪೋಪ್ ತಮ್ಮ 50 ವರ್ಷ ಹಳೆಯ ಪರಿಚಯಸ್ಥರೊಬ್ಬರೊಂದಿಗೆ ಫೋನ್‍ನಲ್ಲಿ ಮಾತಾಡಿ, ಹಳೆಯ ನೆನಪುಗಳನ್ನೆಲ್ಲ..
ಪೋಪ್ ಫ್ರಾನ್ಸಿಸ್ (ಸಂಗ್ರಹ ಚಿತ್ರ)
ಪೋಪ್ ಫ್ರಾನ್ಸಿಸ್ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಕಳೆದ ತಿಂಗಳು ಪೋಪ್ ಅಮೆರಿಕ ಭೇಟಿ ನೀಡಿದಾಗ ಒಂದು ಅಚ್ಚರಿಯ ಘಟನೆ ನಡೆದಿದೆ. ಪೋಪ್ ತಮ್ಮ 50 ವರ್ಷ ಹಳೆಯ ಪರಿಚಯಸ್ಥರೊಬ್ಬರೊಂದಿಗೆ ಫೋನ್‍ನಲ್ಲಿ  ಮಾತಾಡಿ, ಹಳೆಯ ನೆನಪುಗಳನ್ನೆಲ್ಲ ಮರುಕಳಿಸುವಂತೆ ಮಾಡಿ ಆನಂತರ ಭೇಟಿ ನೀಡಿ ಆತನಿಗೊಂದು ಬೆಚ್ಚನೆ ಅಪ್ಪುಗೆ ನೀಡಿದ್ದಾರೆ.

ಆದರೆ ಸಿಹಿಸುದ್ದಿಯಾಗಬೇಕಿದ್ದ ಇದು ವಿವಾದಕ್ಕೆ ಎಡೆಮಾಡಿದೆ. ವಿವಾದಕ್ಕೆ ಕಾರಣ ಇಲ್ಲದಿಲ್ಲ. ಆ ಹಳೆಯಪರಿಚಯದ ವ್ಯಕ್ತಿ ಸಲಿಂಗ ಕಾಮಿ ಎಂಬುದೇ ಹಲವರ ಹುಬ್ಬೇರಲು ಕಾರಣವಾಗಿದೆ. ಯಾಯೋ ಗ್ರಾಸಿ ಎಂಬ ಸಲಿಂಗಿಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಒಂದು ಸರ್‍ಪ್ರೈಸ್ ಕರೆ. ಕರೆಮಾಡಿದವರು ಆತನನ್ನು ಅಡ್ಡ ಹೆಸರಿನಿಂದ ಕರೆದಾಗ ಯಾರಿರಬಹುದೆಂಬ ಕುತೂಹಲ. ವಿಶೇಷವೆಂದರೆ ಒಬ್ಡುಲಿಯೋ ಎಂಬ ಅಡ್ಡಹೆಸರಿನ ಗ್ರಾಸಿಗೆ ಪೋಪ್ ಫ್ರಾನ್ಸಿಸ್ ಹೈಸ್ಕೂಲ್ ನಲ್ಲಿ ಶಿಕ್ಷಕರಾಗಿದ್ದರು! ಆಗ ಅವರ ಹೆಸರು ಜೊರ್ಜ್ ಮಾರಿಯೋ ಬರ್ಗೊಗ್ಲಿಯೋ ಎಂದಿತ್ತು.

ತಮ್ಮನ್ನು ಗುರುತು ಹಿಡಿಯುವಂತೆ ಸತಾಯಿಸಿದ ಪೋಪ್, ಆ ನಂತರ ಅಮೆರಿಕಗೆ ಬಂದಾಗ ಭೇಟಿ ಮಾಡಿ ಒಂದು ಅಪ್ಪುಗೆ ನೀಡುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ. ಅಂದ ಮಾತಿನಂತೆ ಸೆ.23 ರಂದು ಭೇಟಿ ಮಾಡಿದ್ದಾರೆ. ಸಲಿಂಗಿ ಗ್ರಾಸಿ, ಪೋಪ್‍ರನ್ನು ಭೇಟಿ ಮಾಡಲು ತನ್ನ ಬಾಯ್ ಫ್ರೆಂಡ್‍ನೊಂದಿಗೆ ಬಂದಿದ್ದಾನೆ. ಪೋಪ್ ಗ್ರಾಸಿಗೆ ಹಗ್ ನೀಡಿದರೆ, ಆತನ ಬಾಯ್ಫ್ರೆಂಡ್ ಇವಾನ್ ಕೆನ್ನೆಗೆ  ಮುತ್ತಿಟ್ಟಿದ್ದಾರೆ. ಈ ಹದಿನೈದು ನಿಮಿಷಗಳ ಭೇಟಿ ಇದೀಗ ಭಾರಿ ಸುದ್ದಿಯಾಗಿದೆ. ಭಾರಿ ವಿವಾದಕ್ಕೂ ಗ್ರಾಸವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com