
ಲಂಡನ್: ಇದು ವಯಾಗ್ರದೊಂದಿಗೆ ಸರಸವಾಡಿ ಹಾವು ಸಾಯದು ಕೋಲು ಮುರಿಯದು ಎಂಬ ಸಂಕಷ್ಟಕ್ಕೆ ಸಿಲುಕಿಕೊಂಡವನ ಕಥೆ. ಸಂಗಾತಿಯೊಂದಿಗೆ ಸುಖಿಸೋ ಸಮಯದಲ್ಲಿ ಕೃತಕ ಉದ್ರೇಕಕ್ಕಾಗಿ ವಯಾಗ್ರ ಬಳಸುವುದು ಇತ್ತೀಚೆಗೆ ಕಾಮನ್. ಆದರೆ ಸುಖಾಸುಮ್ಮನೆ ಥ್ರಿಲ್ಲಿಗಾಗಿ ವಯಾಗ್ರ ತೆಗೆದುಕೊಂಡರೆ ಏನಾದೀತು? ಓವರ್‍ಡೋಸ್‍ನಿಂದ ಪ್ರಾಣಹಾನಿ ಆದೀತೆಂಬ ಎಚ್ಚರಿಕೆ ವಯಾಗ್ರ ಪೊಟ್ಟಣದ ಮೇಲೆ ಇದ್ದಾಗ್ಯೂ ಅನಾಮತ್ತು 35 ಗುಳಿಗೆ ನುಂಗಿದರೆ ಆತನ ಪರಿಸ್ಥಿತಿ ಏನಾಗಿರಬೇಡ? ಹಾಗಾದ್ರೆ, ಯಾರ್ಕ್ ಶೈರ್ ನಲ್ಲಾದ ಈ ಕಥೆ ಓದಿಕೊಳ್ಳಿ.
ಡೇನಿಯಲ್ ಮೆಡ್ ಫೋರ್ಥ್ ಎಂಬಾತ ವಾರಾಂತ್ಯದ ರಜೆ ಕಳೆಯಲು ಗೆಳೆಯನ ಮನೆಗೆ ಹೋಗಿದ್ದಾನೆ. ಅಲ್ಲಿ ಪಾನಗೋಷ್ಟಿಯ ನಂತರ ಸುಮ್ಮಸುಮ್ಮನೆ ವಯಾಗ್ರ ಮಾತ್ರೆ ನುಂಗಲಾರಂಭಿಸಿದ್ದಾನೆ. ಅಡಿಕ್ಷನ್ ಎಂಬಂತೆ ಒಂದಾದಮೇಲೊಂದರಂತೆ 36 ಮಾತ್ರೆ ನುಂಗಿದ್ದಾನೆ. ಆಗ ಶುರುವಾಗಿದೆ ತಲೆಸುತ್ತುವಿಕೆ, ವಾಂತಿ,ನಗು, ಅಳು, ಭ್ರಮೆ ಹೀಗೆ ಒಂದಲ್ಲ ಎರಡಲ್ಲ ಅಷ್ಟೊಂದು ಮಿಶ್ರಭಾವ! ಅದೆಲ್ಲದರ ಜೊತೆಗೆ ಹತ್ತಿಕ್ಕಲಾರದ ಉದ್ರೇಕ. ನೈಂಟಿ ಮತ್ತಿನಲ್ಲಿ ಮಾಡಿದ ತಪ್ಪಿಗೆ ನೈಂಟಿ ಡಿಗ್ರಿ ಶಿಕ್ಷೆ ಶುರುವಾಗಿದೆ. ಗೆಳೆಯನಿಗೂ ಏನು ಮಾಡೋದೆಂದು ತೋಚದಾದಾಗ ಡೆನಿಯಲ್ ನ ಹೆಂಡತಿಗೆ ತಿಳಿಸಿದ್ದಾನೆ. ಆಕೆ ಕೂಡಲೆ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾಳೆ. ಅಲ್ಲಿನ ಡಾಕ್ಟರ್ ಮತ್ತು ನರ್ಸ್‍ಗಳು ಈತನ ಸ್ಥಿತಿ ನೋಡಿ ಬರುತ್ತಿರುವ ನಗುವನ್ನೂ ತಡೆದುಕೊಂಡು ಚಿಕಿತ್ಸೆ ನೀಡಿದ್ದಾರೆ.2 ದಿನಗಳ ನಂತರ ಪರಿಸ್ಥಿತಿ ಸುಧಾರಿಸಿದೆ.ಆದರೆ ಐದು ದಿನದ ತನಕ ಚಿಕ್ಕ ವಸ್ತು, ಬಟ್ಟೆ ತುಂಡು, ಹೀಗೆ ಏನೇ ತಾಕಿದರೂ ಮತ್ತೆ ಆತನ ಪುರುಷತ್ವ ಎದ್ದುನಿಲ್ಲುವಂತಾಗುತ್ತಿತ್ತು ಎಂದು ಆತನೇ ಹೇಳಿಕೊಂಡಿದ್ದಾನೆ.
--
ವಯಾಗ್ರ ಓವರ್ ಡೋಸ್ ನ್ನು ಹಗುರವಾಗಿ ಪರಿಗಣಿಸಬೇಡಿ.ಅದು ಪುರುಷತ್ವದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಎದೆನೋವು, ಪ್ರಜ್ಞಾಹೀನತೆ, ಅತಿ ರಕ್ತದೊತ್ತಡ, ಮೆದುಳು ರಕ್ತಸ್ರಾವ ಅಥವಾ ಸಾವನ್ನೂ ತಂದೊಡ್ಡಬಲ್ಲದು.
- ಡಾ. ಕೂಪರ್ ಸನ್, ವೈದ್ಯ
Advertisement