
ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಮಾನವರಹಿತ, ಶಸ್ತ್ರಾಸ್ತ್ರ ರಹಿತ, ಸಣ್ಣ ವ್ಯಾಪ್ತಿಯ ವೈಮಾನಿಕ ವಾಹನಗಳನ್ನು (ಡ್ರೋನ್) ಪೂರೈಸಲು ಅಮೆರಿಕಾ ಅನುಮೋದನೆ ನೀಡಿದೆ.
ಉಗ್ರ ವಿರೋಧಿ ಚಟುವಟಿಕೆಗಳಿಗೆ ಕಣ್ಗಾವಲಿಡಲು ಸಹಾಯವಾಗುವ ಈ ಸಾಧನಗಳನ್ನು ಸ್ಕ್ಯಾನ್ ಈಗಲ್ ಸಿಸ್ಟಮ್ಸ್ ಸೇವೆ ನೀಡಲಿದೆ ಎಂದು ಮಂಗಳವಾರ ದ ನೇಶನ್ ವರದಿ ಮಾಡಿದೆ.
ವರದಿಗಳ ಪ್ರಕಾರ ವಿದೇಶಿ ಮಿಲಿಟರಿ ಮಾರಾಟ (ಎಫ್ ಎಂ ಎಸ್) ಕಾರ್ಯಕ್ರಮ ಆಗಸ್ಟ್ ೨೦೧೬ರಡಿ ಹಾರ್ಡ್ವೇರ್ ಮತ್ತು ತಾಂತ್ರಿಕ ಡೇಟಾವನ್ನು ಪಾಕಿಸ್ತಾನಕ್ಕೆ ನೀಡಲಿದೆ.
ಒಪ್ಪಂದದ ಪ್ರಕಾರ ೧೦.೫೨ ಮಿಲಿಯನ್ ಡಾಲರ್ ನೀಡಿ, ಉತ್ಪನ್ನಗಳನ್ನು ಅಮೆರಿಕಾದಿಂದ ಪಡೆಯಲಿದೆ.
Advertisement