ಟ್ಯುನೇಷಿಯಾ ನ್ಯಾಷನಲ್ ಸಿವಿಲ್ ಸೊಸೈಟಿಗೆ ನೊಬೆಲ್ ಶಾಂತಿ ಪುರಸ್ಕಾರ

ಬಹುನಿರೀಕ್ಷಿತ 2015ರ ನೊಬೆಲ್ ಶಾಂತಿ ಪುರಸ್ಕಾರ ಟ್ಯುನೀಷಿಯಾ ದೇಶದ ನ್ಯಾಷನಲ್ ಸಿವಿಲ್ ಸೊಸೈಟಿಗೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ...
ರಾಷ್ಟ್ರೀಯ ಸಂವಾದ ಸಮೂಹ (ಸಂಗ್ರಹ ಚಿತ್ರ)
ರಾಷ್ಟ್ರೀಯ ಸಂವಾದ ಸಮೂಹ (ಸಂಗ್ರಹ ಚಿತ್ರ)

ಸ್ಕಾಕ್ ಹೋಮ್: ಬಹುನಿರೀಕ್ಷಿತ 2015ರ ನೊಬೆಲ್ ಶಾಂತಿ ಪುರಸ್ಕಾರ ಟ್ಯುನೇಷಿಯಾ ದೇಶದ ರಾಷ್ಟ್ರೀಯ ಸಂವಾದ ಸಮೂಹ (ದಿ ಟ್ಯುನಿಶಿಯನ್ ನ್ಯಾಷನಲ್ ಡಯಲಾಗ್ ಕ್ವಾರ್ಟೆಟ್)ಕ್ಕೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

ಟ್ಯುನೇಷಿಯಾದಲ್ಲಿ ಬಹುಸಾಂಸ್ಕೃತಿಕ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಶ್ರಮಿಸಿದ ಸೇವೆಯನ್ನು ಗೌರವಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. 2011ರಲ್ಲಿ ಜಾಸ್ಮಿನ್ ರೆವಲ್ಯೂಷನ್ ಮೂಲಕ ಬೆಳಕಿಗೆ ಬಂದ ರಾಷ್ಟ್ರೀಯ ಸಂವಾದ ಸಮೂಹ, ಟ್ಯುನೇಷಿಯಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಲ್ಲಿ ನಿರ್ಣಾಯಕ ಪಾತ್ರವಹಿಸಿತ್ತು.

ಆಂತರಿಕ ಕಲಹದಿಂದಾಗಿ ನರಳುತ್ತಿದ್ದ ಟ್ಯುನೇಷಿಯಾದಲ್ಲಿ ‘ದಿ ಟ್ಯುನಿಶಿಯನ್ ನ್ಯಾಷನಲ್ ಡಯಲಾಗ್ ಕ್ವಾರ್ಟೆಟ್’ 2013ರಲ್ಲಿ ತನ್ನದೇ ಆದ ಪರ್ಯಾಯ ಶಾಂತಿಯುತ ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸಿತ್ತು. ಆ ಮೂಲಕ  ಇಡೀ ದೇಶದ ಪ್ರಜೆಗಳ ಪರವಾಗಿ ನಿಂತು ಮಾನವ ಹಕ್ಕುಗಳಿಗಾಗಿ ಶಾಂತಿಯುತವಾಗಿ ಹೋರಾಡಿತ್ತು. ಹೀಗಾಗಿ ಅರ್ಹವಾಗಿಯೇ ರಾಷ್ಟ್ರೀಯ ಸಂವಾದ ಸಮೂಹಕ್ಕೆ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com