ನವದೆಹಲಿ: ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಇಸ್ಲಾಮಾಬಾದ್‍ನಿಂದ 100 ಕಿ.ಮೀ. ದೂರದಲ್ಲಿದ್ದ ಅಬೋಟಾಬಾದ್‍ನಲ್ಲಿ ನೆಲೆಸಿದ್ದ ವಿಚಾರ ಪಾಕಿಸ್ತಾನ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು.
ಒಸಾಮಾ 9 ವರ್ಷಗಳಿಂದ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದ! ಈ ವಿಚಾರವನ್ನು ಅಮೆರಿಕದವರೋ, ಅಫ್ಘಾನಿಸ್ತಾನ ಸರ್ಕಾರವೋ ಹೇಳಿದ್ದರೆ ಪಾಕ್‍ನ ಬಹುತೇಕರು ಸುಳ್ಳೆಂದು ಸರಾಸಗಟಾಗಿ ತಿರಸ್ಕರಿಸಿ ಬಿಡುತ್ತಿದ್ದರು. ಆದರೆ, ಇದನ್ನು ಈಗ ಬಹಿರಂಗಪಡಿಸಿದ್ದು ಬೇರಾರೂ ಅಲ್ಲ. ಅಮೆರಿಕದ ಸೀಲ್ ಪಡೆಗಳಿಂದ ಹತ್ಯೆಗೀಡಾದಾಗ ಪಾಕ್ ರಕ್ಷಣಾ ಸಚಿವರಾಗಿದ್ದ ಚೌಧರಿ ಮುಕ್ತಾರ್.
ಆಗಿನ ಪಾಕ್ ಅಧ್ಯಕ್ಷ ಜರ್ದಾರಿಯ ಕಣ್ಣು, ಕಿವಿ ಎರಡೂ ಆಗಿದ್ದ ಚೌಧರಿ ಪ್ರಕಾರ, ಸರ್ಕಾರದ ಆಯಕಟ್ಟಿನಲ್ಲಿರುವವರು ಹಾಗೂ ಸೇನಾ ಮುಖ್ಯಸ್ಥ ಖಯಾನಿ, ಐಎಸ್‍ಐ ಮುಖ್ಯಸ್ಥ ಸೇರಿ ಅನೇಕರಿಗೆ ಈ ಸತ್ಯ ಗೊತ್ತಿತ್ತು. ಪಾಕಿಸ್ತಾನದ ಅತಿಥಿಯಂತೆ ಒಸಾಮಾ ನೆಲೆಸಿದ್ದ ಎಂಬುದೂ ಚೌಧರಿ ಹೇಳಿಕೆಯಿಂದಾಗಿ ಬಹಿರಂಗವಾಗಿದೆ. ಪಾಕಿಸ್ತಾನದವರಿಂದಲೇ ಈ ಸತ್ಯ ಬಯಲಾಗುವ ಮೂಲಕ ದೇಶದ ಮತ್ತೊಂದು ಮುಖ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಕಳಚಿ ಬಿದ್ದಂತಾಗಿದೆ.
Advertisement