ಅ.28ರಂದು ದೆಹಲಿಯಲ್ಲಿ ಜುಕರ್‍ಬರ್ಗ್ ಪ್ರಶ್ನೋತ್ತರ

ಫೇಸ್‍ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಈ ತಿಂಗಳ ಕೊನೆಯಲ್ಲಿ ದೆಹಲಿ ಐಐಟಿಯಲ್ಲಿ ಟೌನ್‍ಹಾಲ್ ಪ್ರಶ್ನೋತ್ತ ರ...
ಮಾರ್ಕ್ ಜುಕರ್ ಬರ್ಗ್
ಮಾರ್ಕ್ ಜುಕರ್ ಬರ್ಗ್

ನವದೆಹಲಿ: ಫೇಸ್‍ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಈ ತಿಂಗಳ ಕೊನೆಯಲ್ಲಿ ದೆಹಲಿ ಐಐಟಿಯಲ್ಲಿ ಟೌನ್‍ಹಾಲ್ ಪ್ರಶ್ನೋತ್ತ ರ ಕಾರ್ಯಕ್ರಮ ನಡೆಸಿಕೊಡಲಿದ್ದು, ಭಾರತೀಯರು ಫೇಸ್‍ಬುಕ್‍ನಲ್ಲಿ ಹೆಚ್ಚು ಸಕ್ರಿಯವಾದ ಸಮುದಾಯ ಎಂದು ಕೊಂಡಾಡಿದ್ದಾರೆ. 

ಭಾರತದಲ್ಲಿ 13 ಕೋಟಿ ಮಂದಿ ಫೇಸ್‍ಬುಕ್ ಬಳಸುತ್ತಾರೆ. ಹೆಚ್ಚು ಸಕ್ರಿಯವಾದ ಮತ್ತು ಸಮುದಾಯದ ಜತೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿರುವ ಈ ಭಾರತೀಯರ ಜತೆ ನಾನು ನೇರವಾಗಿ ಸಂಭಾಷಿಸಬಯಸುತ್ತೇನೆ. ಅಕ್ಟೋಬರ್ 28ರಂದು ದೆಹಲಿಯಲ್ಲಿ ಟೌನ್‍ಹಾಲ್ಪ್ರ ಶ್ನೋತ್ತರ ಕಾರ್ಯಕ್ರಮ ನಡೆಸಿಕೊಡಲಿದ್ದೇನೆ ಎಂದು ಮಾರ್ಕ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಪ್ರಕಟಿಸಿದ್ದಾರೆ. 
ಪ್ರಶ್ನೆಗಳಿದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ. ಪ್ರಶ್ನೆಗೆ ವೋಟ್ ಮಾಡು ವುದಾದರೆ ಲೈಕ್ ಒತ್ತಿ. ನೇರ ಸಭಿಕರ ಜತೆ ಮಾತ್ರ ವಲ್ಲದೆ ಫೇಸ್‍ಬುಕ್‍ನಲ್ಲಿ ಬಂದ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ. ನಾನು ಬಹಿರಂಗವಾಗಿ ಹೇಳದ, ಹೆಚ್ಚಿನವರಿಗೆ ಗೊತ್ತಿಲ್ಲದ ಸಂಗತಿ ಯೆಂದರೆ ಭಾರತ ನಮ್ಮ ಸಂಸ್ಥೆಯ ಇತಿಹಾಸದಲ್ಲಿ ಅತ್ಯಂತ ಮುಖ್ಯವಾದ್ದು ಎಂದು ಮಾರ್ಕ್ ಹೇಳಿಕೊಂಡಿದ್ದಾರೆ. 
ಹಿಂದೊಮ್ಮೆ ನಾನು ಕಂಪನಿಯನ್ನು ಮಾರಲು ಹೊರಟಿದ್ದಾಗ, ಭಾರತಕ್ಕೊಮ್ಮೆ ಭೇಟಿ ನೀಡುವಂತೆ ಸ್ಟೀವ್ ಜಾಬ್ಸ್ ಸಲಹೆ ನೀಡಿದ್ದರು. ಅದರಂತೆ ನಾನು ಭಾರತದಲ್ಲಿ ಒಂದು ತಿಂಗಳ ಪ್ರವಾಸ ಮಾಡಿದೆ. ಇಲ್ಲಿನ ಜನ ಹೇಗೆ ಸಂಪರ್ಕ ಬೆಳೆಸಿಕೊಂಡಿದ್ದಾರೆ, ಸಂವಹ ನ ಮಾಡುತ್ತಾರೆ ನೋಡಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com