ಪಾಕಿಸ್ತಾನದ ಮೇಲೆ ಶೆಲ್ ದಾಳಿ ನಡೆಸಿದ ಇರಾನ್

ಇರಾನಿನ ಗಡಿ ಭದ್ರತಾ ಪಡೆ ಶನಿವಾರ ಪಾಕಿಸ್ತಾನದ ಮೇಲೆ ೮ ಮಾರ್ಟರ್ ಶೆಲ್ ಗಳನ್ನು ಹಾರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಇರಾನಿನ ಗಡಿ ಭದ್ರತಾ ಪಡೆ ಶನಿವಾರ ಪಾಕಿಸ್ತಾನದ ಮೇಲೆ ೮ ಮಾರ್ಟರ್ ಶೆಲ್ ಗಳನ್ನು ಹಾರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇರಾನ್ ಹಾರಿಸಿದ ಈ ಶೆಲ್ ಗಳು ಪಾಕಿಸ್ತಾನದ ಬಲೋಚಿಸ್ಥಾನದ ಪಂಜ್ಗೂರ್ ಗ್ರಾಮದಲ್ಲಿ ಬಿದ್ದಿವೆ ಎಂದು ಭದ್ರತಾ ಅಧಿಕಾರಿ ಡಾನ್ ಪತ್ರಿಕೆಗೆ ತಿಳಿಸಿರುವುದಾಗಿ ವರದಿಯಾಗಿದೆ.

ಆದರೆ ಯಾವುದೇ ಆಸ್ತಿ ಹಾನಿಯಾಗಿಲ್ಲ ಅಥವಾ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಘಟನೆಯ ಹಿನ್ನಲೆಯಲ್ಲಿ ಇರಾನಿನ ಗಡಿಯಲ್ಲಿ ಪಾಕಿಸ್ತಾನ ಭದ್ರತೆಯನ್ನು ಹೆಚ್ಚಿಸಿದೆ.

ಕಳೆದ ವರ್ಷದ ಅಕ್ಟೋಬರ್ ಮತ್ತು ಈ ವರ್ಷದ ಜುಲೈ ನಲ್ಲಿ ಕೂಡ ಇರಾನ್ ಗಡಿ ನೀತಿಯನ್ನು ಉಲ್ಲಂಘಿಸಿ ಶೆಲ್ ದಾಳಿ ನಡೆಸಿತ್ತು. ಇದರ ವಿರುದ್ಧ ಪಾಕಿಸ್ತಾನ ಪ್ರತಿಭಟನೆ ನಡೆಸಿತ್ತು. ಇರಾನ್ ಜೊತೆ ಪಾಕಿಸ್ತಾನ ೯೦೦ ಕಿಲೋ ಮೀಟರ್ ಗಳ ಗಡಿ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com