ಮೋದಿಯೊಂದಿಗಿನ ಸಂಬಂಧಕ್ಕೆ ಒಬಾಮ ಮಹತ್ವ: ಶ್ವೇತ ಭವನ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂಬಂಧಕ್ಕೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಅತಿ ಹೆಚ್ಚು ಮಹತ್ವ ನೀಡಲಿದ್ದಾರೆ ಎಂದು ಅಮೆರಿಕಾದ ಶ್ವೇತ ಭವನ ಹೇಳಿದೆ.
ನರೇಂದ್ರ ಮೋದಿ-ಬರಾಕ್ ಒಬಾಮ(ಸಂಗ್ರಹ ಚಿತ್ರ)
ನರೇಂದ್ರ ಮೋದಿ-ಬರಾಕ್ ಒಬಾಮ(ಸಂಗ್ರಹ ಚಿತ್ರ)
Updated on: 

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂಬಂಧಕ್ಕೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಅತಿ ಹೆಚ್ಚು ಮಹತ್ವ ನೀಡಲಿದ್ದಾರೆ ಎಂದು ಅಮೆರಿಕಾದ ಶ್ವೇತ ಭವನ ಹೇಳಿದೆ.
ಉಭಯ ನಾಯಕರೂ ಅತ್ಯುತ್ತಮ ಪಾಲುದಾರಿಕೆ ಹೊಂದಿದ್ದಾರೆ, ಆರ್ಥಿಕ ಅವಕಾಶಗಳನ್ನು ವಿಸ್ತರಿಸುವ ವಿಷಯದಲ್ಲಿ ಈ ದ್ವಿಪಕ್ಷೀಯ ಸಂಬಂಧ ಪ್ರಮುಖವಾಗಿದ್ದು ಮೋದಿ ಅವರೊಂದಿಗೆ ಸಂಬಂಧಕ್ಕೆ ಬರಾಕ್ ಒಬಾಮ ಹೆಚ್ಚು ಮಹತ್ವ ನೀಡಲಿದ್ದಾರೆ. ಅಮೇರಿಕ ಹಾಗೂ ಭಾರತ ಅತ್ಯಂತ ನಿಕಟವಾಗಿ ಕೆಲಸ ಮಾಡುತ್ತಿವೆ ಎಂದು ವೈಟ್ ಹೌಸ್ ನ ಪತ್ರಿಕಾ ಕಾರ್ಯದರ್ಶಿ ಹೇಳಿದ್ದಾರೆ.
ಭಾರತದೊಂದಿಗಿನ ಸಂಬಂಧದೆಡೆಗೆ ಗಮನ ಕೇಂದ್ರೀಕರಿಸಲು ಬರಾಕ್ ಒಬಾಮ ವೈಟ್ ಹೌಸ್ ನಲ್ಲಿರುವ ತಮ್ಮ ತಂಡಕ್ಕೆ ನಿರ್ದೇಶನ ನೀಡಿದ್ದು ಸಹಕಾರವನ್ನು ವೃದ್ಧಿಸುವ ಅವಕಾಶಗಳನ್ನು ಹೆಚ್ಚಿಸುವಂತೆ ಸೂಚಿಸಿದ್ದಾರೆ ಎಂದು ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಷುಲ್ಟ್ಜ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com