ಪಾಕ್ ಪ್ರಧಾನಿ ನವಾಜ್ ಷರೀಫ್ (ಸಂಗ್ರಹ ಚಿತ್ರ)
ವಿದೇಶ
ಷರೀಫ್ ಮೇಲೆ ನ್ಯಾಯಾಂಗ ನಿಂದನೆ ಕೇಸು!
ವಿಶ್ವಸಂಸ್ಥೆಯಲ್ಲಿ ಉರ್ದುವಿನಲ್ಲಿ ಮಾತನಾಡಲಿಲ್ಲವೆಂಬ ಕಾರಣಕ್ಕೆ ಪಾಕ್ ಪ್ರಧಾನಿ ಷರೀಫ್ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿದೆ...
ಇಸ್ಲಾಮಾಬಾದ್: ವಿಶ್ವಸಂಸ್ಥೆಯಲ್ಲಿ ಉರ್ದುವಿನಲ್ಲಿ ಮಾತನಾಡಲಿಲ್ಲವೆಂಬ ಕಾರಣಕ್ಕೆ ಪಾಕ್ ಪ್ರಧಾನಿ ಷರೀಫ್ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿದೆ.
ಉರ್ದುವನ್ನು ದೇಶದ ಅಧಿಕೃತ ಭಾಷೆಯಾಗುವಂತೆ ಮಾಡಲು ಸಂವಿಧಾನದ 251ನೇ ವಿಧಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಪಾಕ್ ಸುಪ್ರೀಂ ಕೋರ್ಟ್ ಸೆಪ್ಟೆಂಬರ್‍ನಲ್ಲಿ ಆದೇಶಿಸಿತ್ತು. ರಾಜಕೀಯ ಮುಖಂಡರು, ಅಧಿಕಾರಿಗಳು ಉರ್ದುವಲ್ಲೇ ವ್ಯವಹರಿಸುವಂತೆ ತಾಕೀತು ಮಾಡಿತ್ತು.
ಇದೀಗ ಝಹೀದ್ ಘಜ್ನಿ ಎಂಬ ವ್ಯಕ್ತಿ, ಷರೀಫ್ ಕೊರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆಂದು ಪ್ರಕರಣ ದಾಖಲಿಸಿದ್ದಾರೆ. ರಷ್ಯಾ ಅಧ್ಯಕ್ಷ, ಚೀನಾ ಅಧ್ಯಕ್ಷ, ಭಾರತೀಯ ವಿದೇಶಾಂಗ ಸಚಿವೆ, ಕ್ಯೂಬಾ ಅಧ್ಯಕ್ಷರು ಅವರವರ ದೇಶ ಭಾಷೆಗಳಲ್ಲೇ ಭಾಷಣ ಮಾಡಿದ್ದನ್ನು ಕಕ್ಷಿದಾರ ಉಲ್ಲೇಖಿಸಿದ್ದಾರೆ. ಇನ್ನೂ ಒಬ್ಬ ವ್ಯಕ್ತಿ ಇದೇ ತೀರ್ಪಿನ ಹಿನ್ನೆಲೆಯಲ್ಲಿ ನವಾಜ್ ಮೇಲೆ ಕೇಸು ದಾಖಲಿಸಿದ್ದಾನೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ